ಜಿಲ್ಲೆ

ಅದಾಯದ ಮಿತಿಯಲ್ಲಿ ಅಭಿವೃದ್ಧಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಪುರಸಭೆ ಹೊಂದಿರುವ ಆದಾಯದ ಮಿತಿಯಲ್ಲಿ ಅದ್ಯತೆಯ ಮೇರೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ ಹೇಳಿದರು.

ಇಲ್ಲಿನ ಪುರಸಭೆಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಂಡಿದೆ. ವಿದ್ಯುತ್ ಸಮಸ್ಯೆಯಾಗದಂತೆ ಹೆಚ್ಚುವಾರಿ ಪರಿವರ್ತಕಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗುವುದು. ವಸತಿ ಶಾಲೆ ಮತ್ತು ಬಾಲಕಿಯರ ವಸತಿನಿಲಯಗಳ ನಿರ್ಮಾಣ ಮತ್ತು ಸ್ಥಾಪನೆ ಪುರಸಭೆ ವ್ಯಾಪ್ತಿಯಲ್ಲಿ ಬರುವುದಿಲ್ಲ. ಸರ್ಕಾರದ ಮಟ್ಟದಲ್ಲಿ ನಡೆಯಬೇಕು. ಶಾಸಕರ ಗಮನಕ್ಕೆ ತಂದು ಬೇಡಿಕೆ ಸಾಕಾರಗೊಳಿಸಲಾಗುವುದು. ಶವ ಸಾಗಣೆ ವಾಹನ ಖರೀದಿಗೆ ಪುರಸಭೆಯಲ್ಲಿ ಅವಕಾಶವಿಲ್ಲ. ಸ್ಮಶಾನ ಅಭಿವೃದ್ಧಿ ಮತ್ತು ಶವ ಸುಡಲು ಚಿತಾಗಾರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿದ್ದ ಕೆಲವರು ವಸತಿ ಶಾಲೆ, ಬಾಲಕಿಯರ ವಸತಿ ನಿಯಲಗಳನ್ನು ಪಟ್ಟಣದಲ್ಲಿ ಪ್ರಾರಂಭಿಸಬೇಕು. ಅಲ್ಲದೆ, ಶವ ಸಾಗಣೆ ವಾಹನ ಖರೀದಿ ಬಗ್ಗೆ ಚಕಾರ ಎತ್ತಿದರು.