ಬಳ್ಳಾರಿ : ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ಕೊಲೆ ಆರೋಪಿ ದರ್ಶನ್ ಬೆನ್ನು ನೋವಿನ ಚಿಕಿತ್ಸೆಗಾಗಿ ಎಂಆರ್‌ಐ ಹಾಗೂ ಸಿಟಿ ಸ್ಕಾೃನಿಂಗ್ ಮಾಡಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದವು.
ಕಳೆದ ಕೆಲ ದಿನಗಳ ಹಿಂದ ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಬಿಮ್ಸ್ ನ್ಯೋರೊ ಹಾಗೂ ಅರ್ಥೋ ವೈದ್ಯರು ದರ್ಶನ್‌ಗೆ ಆರೋಗ್ಯ ತಪಾಸಣೆ ನಡೆಸಿ ಸ್ಕಾೃನಿಂಗ್ ಮಾಡಿದರೆ ಸರ್ಜರಿ ಮಾಡಬೇಕು ಅಥವಾ ಇಲ್ಲವೋ ಎಂಬುದು ತಿಳಿಯಲಾಗುವುದು ಎಂದು ಜೈಲು ಅಧಿಕಾರಿಗಳಿಗೆ ಮೆಡಿಕಲ್ ವರದಿ ನೀಡಿದ್ದರು. ಆದರೆ, ದರ್ಶನ್ ಸ್ಕಾೃನಿಂಗ್ ಬೇಡ ಕೇವಲ ನೋವಿನ ಮಾತ್ರೆಗಳನ್ನು ನೀಡಿ ಎಂದು ನಿರಾಕರಣೆ ಮಾಡಿದ್ದರು. ದಿನೇ ದಿನೇ ಬೆನ್ನು ನೋವಿನ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಜೈಲು ಅಧಿಕಾರಿಗಳು ಸ್ಕಾೃನಿಂಗ್ ಮಾಡಿಸಿಕೊಳ್ಳುವಂತೆ ದರ್ಶನ್‌ಗೆ ಮನವರಿಕೆ ಮಾಡಿದ್ದಾರೆ. ಇದರನ್ವಯ ಪತ್ನಿ ವಿಜಯಲಕ್ಷ್ಮೀ ಮಂಗಳವಾರ ಜೈಲಿಗೆ ಭೇಟಿ ನೀಡಲಿದ್ದು ಜತೆ ಚರ್ಚಿಸಿ ಎಂಆರ್‌ಐ ಹಾಗೂ ಸಿಟಿ ಸ್ಕಾೃನಿಂಗ್‌ಗೆ ಒಳಪಡಲಾಗುವುದು ಎಂಬುದಾಗಿ ದರ್ಶನ್ ತಿಳಿಸಿದ್ದಾರೆ ಎಂದು ಜೈಲು ಅಧೀಕ್ಷಕಿ ಲತಾ ತಿಳಿಸಿದರು.