ಜಿಲ್ಲೆ

ನಾಳೆ ದಾಂಡಿಯಾ ಉತ್ಸವ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ಇಲ್ಲಿನ ಅಲ್ಲಂಭವನದಲ್ಲಿ ಬಳ್ಳಾರಿ ವೈಕಿಂಗ್ಸ್ ಲೇಡಿಸ್ ಸರ್ಕಲ್ 127 ಹಾಗೂ ರೌಂಡ್ ಟೇಬಲ್ 152 ಸಹಯೋಗದೊಂದಿಗೆ ಸೆ.27 ರಂದು ಸಂಜೆ 6 ಗಂಟೆಗೆ ಡಿ3 ನೈಟ್ ( ದಾಂಡಿಯಾ ಉತ್ಸವ ಭಕ್ತಿಯಿಂದ ಬೆರಗುಗೊಳಿಸು) ಎಂಬ ಅರ್ಥದಲ್ಲಿ ಆಚರಿಸಲಾಗುವುದು.

ಕಾರ್ಯಕ್ರಮದಲ್ಲಿ ನಾನಾ ರೀತಿಯ ಆಹಾರ ಪದಾರ್ಥಗಳು, ದಾಂಡಿಯಾ ಸ್ಟಿಕ್ಸ್, ಪಂಜಾಬಿ ಡೋಲ್, ಲೈವ್ ಡಿಜೆ, ವಿಶೇಷ ಬಹುಮಾನ, ಸೆಲ್ಫಿ ಬೂತ್, ಲಕ್ಕಿ ಡ್ರಾ ಸೇರಿದಂತೆ ಹಲವು ಕಾರ್ಯಕ್ರಮ ನಡೆಯಲಿವೆ. ಒಬ್ಬರಿಗೆ 500 ರೂ. ಹಾಗೂ ಆರು ವರ್ಷದಿಂದ ಹತ್ತು ವರ್ಷದೊಳಗಿನ ಮಕ್ಕಳಿಗೆ 200 ರೂ. ಪ್ರವೇಶಾತಿ ಶುಲ್ಕ ನಿಗದಿ ಮಾಡಲಾಗಿದೆ. ಈ ಕಾರ್ಯಕ್ರಮದಿಂದ ಸಂಗ್ರಹಗೊಂಡಿರುವ ಹಣವನ್ನು ಬಡ ಮಕ್ಕಳ ಅಭಿವೃದ್ಧಿಗಾಗಿ ಬಳಕೆ ಮಾಡಲಾಗುವುದು. ದಾಂಡಿಯಾ ಉತ್ಸವದಲ್ಲಿ ರಾಜ್ಯ ಹಾಗೂ ಜಿಲ್ಲೆಯ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ. ರಾಜ್‌ಮಹಲ್ ಫ್ಯಾನ್ಸಿ ಜುವೆಲೆರ್ಸ್‌ ಕಾರ್ಯಕ್ರಮದ ಪ್ರಾಯೋಜಿತ ಹೊಂದಿದೆ.