ಜಿಲ್ಲೆ

ಬಳ್ಳಾರಿ, ಗ್ರಾಹಕರ ಮೆಚ್ಚುಗೆ ಪಡೆದ ಆರ್.ಕೆ. ಎಲೆಕ್ಟ್ರಾನಿಕ್ಸ್

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಇಲ್ಲಿನ ಬ್ರಾಹ್ಮಣ ಬೀದಿ ಮತ್ತು ಕಾಳಮ್ಮ ಬೀದಿಯ ವಾಡ್ಲಾ ಕಾಲೇಜು ಬಳಿ ಇರುವ ಆರ್.ಕೆ. ಎಲೆಕ್ಟ್ರಾನಿಕ್ಸ್ ಶೋ ರೂಂನಲ್ಲಿ ಆನ್‌ಲೈನ್ ಸಿಗುವ ಬೆಲೆಗಿಂತ ಕಡಿಮೆ ಬೆಲೆಗೆ ಪ್ರೊಡೆಕ್ಟ್‌ಗಳು ಕೊಡುತ್ತಿರುವುದರಿಂದ ಸಾವಿರಾರು ಗ್ರಾಹಕರು ಮುಗಿಬೀಳುತ್ತಿದ್ದಾರೆ.

ಹೌದು, ಆನ್ ಆನ್‌ಲೈನ್ ಸಿಗುವ ಕಂಪನಿಗಳಿಗೆ ಬೆಲೆ ಕಡಿಮೆ ಕೊಡುವುದಲ್ಲದೆ, ಆನ್‌ಲೈನ್ ಸಿಗುವ ಎಲ್ಲ ರೀತಿಯ ಸೌಲಭ್ಯಗಳು ಇಲ್ಲಿ ದೊರೆಯುತ್ತಿವೆ. ವಿಜಯವಾಣಿ ವಿಜಯೋತ್ಸವದ ಜತೆಗೆ ಈ ಬಾರಿ ಕ್ರೆಡಿಟ್ ಕಾರ್ಡ್ ಮೇಲೆ ಶೇ.15 ಕ್ಯಾಷ್ ಬ್ಯಾಕ್ ನೀಡಲಾಗಿದೆ. ಪ್ರಮುಖವಾಗಿ ಬಜಾಜ್, ಟಿವಿಎಸ್ ಕೊಟಕ್, ಎಚ್‌ಡಿಬಿ ಫೈನಾನ್ಸ್ ಲೋನ್ ಗ್ರಾಹಕರಿಗೆ ಕಲ್ಪಿಸುತ್ತಾರೆ ಎನ್ನುವ ನಂಬಿಕೆಯೊಂದಿಗೆ ಗ್ರಾಹಕರು ಹೆಚ್ಚಿನ ಮಟ್ಟದಲ್ಲಿ ಖರೀದಿಗೆ ಮುಗಿಬೀಳುತ್ತಾರೆ. ದಸರಾ, ದೀಪಾವಳಿ ಸಂದರ್ಭದಲ್ಲಿ ಭರಾಟೆ ಜೋರಾಗಿರುವುದು ಸಾಮಾನ್ಯ ಪ್ರಮುಖ ಕಂಪನಿಗಳು ವಿವಿಧ ರೀತಿಯ ಕೊಡುಗೆಗಳನ್ನು ಕೊಟ್ಟಿರುವುದು ಇದಕ್ಕೆ ಕಾರಣವಾಗಿದೆ.

ಶೂನ್ಯ ಬಡ್ಡಿ ದರಲ್ಲಿ ಸಾಲಸೌಲಭ್ಯ : ಅಲ್ಲದೆ, ಇದರ ಜತೆ ಫೈನಾನ್ಸ್ ಶೇ.0 ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯ ಗ್ರಾಹಕರು ಶೋ ರೂಂಗೆ ಬರಲು ಕಾರಣವಾಗಿದೆ. ಹೀಗಾಗಿ ಆರ್.ಕೆ. ಎಲೆಕ್ಟಾನಿಕ್ಸ್ ಶೋ ರೂಂ ಗೃಹಪಯೋಗಿ ವಸ್ತುಗಳು ಮಾರಾಟ ಹಾಗೂ ಗ್ರಾಹಕರ ಗಳಿಕೆಯಲ್ಲಿ ಜಿಲ್ಲೆಗೆ ಹೆಸರಾಗಿದೆ. ಶೋ ರೂಂನಲ್ಲಿ ವಿವಿಧ ಕಂಪನಿಯ ಫ್ರಿಡ್ಜ್, ಮೊಬೈಲ್, ಟಿವಿ, ಮಿಕ್ಸರ್, ಏರ್ ಕೂಲರ್ ಮತ್ತು ಲ್ಯಾಪ್‌ಟಾಪ್, ಮೊಬೈಲ್ಸ್ ಸೇರಿ ವಿವಿಧ ಬಗೆಯ ಗೃಹಪಯೋಗಿ ವಸ್ತುಗಳ ಲಭ್ಯ ಇವೆ. ಖುದ್ದು ಗ್ರಾಹಕರು ಯಾವುದಾದರೂ ಉಪಕರಣ ಖರೀದಿಸಿದಾಗ, ಸ್ಥಳದಲ್ಲಿಯೇ ವಸ್ತುವಿನ ಆನ್‌ಲೈನ್ ದರವನ್ನು ಕೂಡ ನೋಡಬಹುದು. ಒಂದು ವೇಳೆ ಆರ್.ಕೆ. ಎಲೆಕ್ಟ್ರಾನಿಕ್‌ಗಿಂತ ಕಡಿಮೆ ಇಲ್ಲವೆ ಸಮವಿರುತ್ತದೆಯೇ ವಿನಃ ಅದಕ್ಕಿಂತ ಹೆಚ್ಚಿನ ಬೆಲೆ ಇರುವ ಉದಾಹರಣೆ ಒಮ್ಮೆಯೂ ಕಂಡು ಬಂದಿಲ್ಲ ಎಂದು ಸ್ವತಃ ಗ್ರಾಹಕರೇ ಹೇಳುತ್ತಾರೆ. ಅಲ್ಲದೆ, ಆನ್‌ಲೈನ್ ಮಾರುಕಟ್ಟೆಯಲ್ಲಿ ವಸ್ತುಗಳ ಗುಣಮಟ್ಟ ಕೆಲವೊಮ್ಮೆ ಸರಿಯಾಗಿರುವುದಿಲ್ಲ ಎಂಬ ದೂರುಗಳ ಇವೆ. ಆದರೆ, ಆರ್.ಕೆ. ಎಲೆಕ್ಟ್ರಾನಿಕ್ಸ್ ಅಂಗಡಿಗೆ ಬಂದರೆ ಸ್ಥಳದಲ್ಲೇ ಗುಣಮಟ್ಟದ ವಸ್ತುಗಳನ್ನು ಪರಿಶೀಲಿಸಿ ತೆಗೆದುಕೊಳ್ಳಬಹುದು.

ದೀಪಾವಳಿ ಹಿನ್ನಲೆ ಆಫರ್ : ದೀಪಾವಳಿ ಹಬ್ಬದ ಹಿನ್ನಲೆ ಆನ್‌ಲೈನ್‌ಗಿಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ವಿವಿಧ ಬಗೆಯ ಗೃಹಪಯೋಗಿ ವಸ್ತುಗಳನ್ನು ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಶೇ.10ರಿಂದ 15 ರವರೆಗೆ ಕ್ಯಾಷ್‌ಬ್ಯಾಕ್ ನೀಡಲಾಗುತ್ತಿದೆ. ಶೂನ್ಯ ಬಡ್ಡಿದರದಲ್ಲಿ ವಸ್ತುಗಳನ್ನು ಖರೀಸಬಹುದು.ಒಂದು ತಿಂಗಳ ಕಂತು(ಇಎಂಐ) ಉಚಿತವಾಗಿ ನೀಡಲಾಗುತ್ತಿದೆ. ಪ್ರತಿ ನಿತ್ಯ ಖರೀದಿಸುವ ಗ್ರಾಹಕರಿಗೆ ಲಕ್ಕಿ ಡಿಪ್ ಮೂಲಕ 1 ಗ್ರಾಂ ಬಂಗಾರ ಗೆಲ್ಲಬಹುದು. ಅಲ್ಲದೆ, ಸ್ಕ್ರಾೃಚ್ ಕಾರ್ಡ್ ಮೂಲಕ ನೂರ ರಿಂದ ಐದು ಸಾವಿರ ರೂ. ವರೆಗೂ ಪಡೆಯಬಹುದು.

ಕೋಟ್.. ಬಳ್ಳಾರಿಯಲ್ಲಿ 1999 ರಿಂದ ಶೋ ರೂಂ ಆರಂಭಿಸಿದ್ದು. ಇಲ್ಲಿಗೆ 25 ವರ್ಷಗಳು ಕಳೆದಿವೆ. ಈ ವರೆಗೆ ಗ್ರಾಹಕರನ್ನು ಹೆಚ್ಚಿಸಿದ್ದೇವೆಯೇ ಹೊರತು ಕಡಿಮೆಯಾಗಿಲ್ಲ. ಅದು ನಮ್ಮ ಅಂಗಡಿಯ ಮೇಲೆ ಗ್ರಾಹಕರು ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆ. ಬಳ್ಳಾರಿ ನಗರದಲ್ಲಿ ಪ್ರಸ್ತುತ ಎರಡು ಶೋರೂಂಗಳು ನಡೆಯುತ್ತಿವೆ.

- ಆರ್.ಕೆ. ರವಿ, ಶೋ ರೂಂ ಮಾಲೀಕ ಬಳ್ಳಾರಿ.

ಕೋಟ್.. ಗ್ರಾಹಕರಿಗೆ ಗುಣಮಟ್ಟದ ವಸ್ತುಗಳನ್ನು ತಲುಪಿಸುವ ನಿಟ್ಟಿನಲ್ಲಿ ಆರ್.ಕೆ. ಎಲೆಕ್ಟ್ರಾನಿಕ್ಸ ಒತ್ತು ನೀಡುತ್ತಿದೆ. ಗ್ರಾಹಕರು ಶೋರೂಂಗೆ ಬರುತ್ತಾರೆ. ಬಳ್ಳಾರಿ ನಗರ ಮಾತ್ರವಲ್ಲದೆ ಚಿತ್ರದುರ್ಗ, ವಿಜಯನಗರ, ಕೊಪ್ಪಳ ಮತ್ತು ಆಂಧ್ರದಿಂದ ಗ್ರಾಹಕರು ಬರುತ್ತಿದ್ದಾರೆ. ಗ್ರಾಹಕರ ನಡುವೆ ನಂಬಿಕೆ ಉಳಿಸಿಕೊಂಡಿದ್ದೇವೆ. ಹೀಗಾಗಿ, ಮತ್ತೋಂದು ಶೋರೂಂ ಆರಂಭಿಸುವ ಜತೆಗೆ ಬೇರೆ ಕಡೆಯೂ ಆರಂಭಿಸಲಾಗುವುದು.

- ಆರ್.ಕೆ. ಶ್ರೀಕಾಂತ, ಶೋರಂ ಮಾಲೀಕ, ಬಳ್ಳಾರಿ.

ಕೋಟ್.... ಆರ್.ಕೆ. ಎಲೆಕ್ಟ್ರಾನಿಕ್ಸ್‌ನಲ್ಲಿ ಕಳೆದ ಹಲವು ವರ್ಷಗಳಿಂದ ವಸ್ತುಗಳನ್ನು ಖರೀದಿಸುತ್ತಿರುವೆ. ಗುಣಮಟ್ಟದ ವಸ್ತುಗಳು ಮಾರಾಟ ಮಾಡಿ ಗ್ರಾಹಕರ ವಿಶ್ವಾಸಗಳಿಸಿದೆ. ಅಲ್ಲದೆ, ಹೊಸ ಸ್ಕೀಂಗಳ ಬಗ್ಗೆ ಪರಿಚಯಿಸಿ ಗ್ರಾಹಕರಿಗೆ ಅನುಕೂಲ ಮಾಡಿದೆ. ವಸ್ತುಗಳ ಮಾರಾಟದ ಬೆಲೆಗಿಂತ ಅಧಿಕ ಮಾರಾಟ ಮಾಡುವುದಿಲ್ಲ.

- ಮಂಜು, ಗ್ರಾಹಕ, ಬಳ್ಳಾರಿ

====