ಜಿಲ್ಲೆ

ಬೆಳೆ ವಿಮೆ 9.12 ಕೋಟಿ ರೂ. ಪಾವತಿ

ಬಳ್ಳಾರಿ : ಕೃಷಿ ಇಲಾಖೆಯಿಂದ ಕಳೆದ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಜಿಲ್ಲೆಯ 5401 ರೈತರ ಖಾತೆಗಳಿಗೆ ಒಟ್ಟು 9.12 ಕೋಟಿ ರೂ. ಮೊತ್ತದ ಬೆಳೆ ವಿಮೆ ಪರಿಹಾರ ವರ್ಗಾಯಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಎಂ.ಸೋಮಸುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಳ್ಳಾರಿ ತಾಲೂಕು 1077 ರೈತರಿಗೆ 2.52 ಕೋಟಿ ರೂ., ಕುರುಗೋಡು 404 ರೈತರಿಗೆ 62 ಲಕ್ಷ ರೂ., ಕಂಪ್ಲಿ 1854 ರೈತರಿಗೆ 3.58 ಕೋಟಿ ರೂ. ಸಂಡೂರು 689 ರೈತರಿಗೆ 16 ಲಕ್ಷ ರೂ., ಸಿರಗುಪ್ಪ 1377 ರೈತರಿಗೆ 2.24 ಕೋಟಿ ರೂ. ಇತ್ಯರ್ಥ ಪಡಿಸಲಾಗಿದೆ. ಹಾಗಾಗಿ ರೈತರು ಪ್ರಸ್ತಕ ಸಾಲಿನ ಬೆಳೆಗಳಿಗೂ ಬೆಳೆ ವಿಮೆ ಮಾಡಿಸಬೇಕು ಎಂದು ಕೋರಿದ್ದಾರೆ.

ಸೂರ್ಯಕಾಂತಿ, ತೊಗರಿ, ಹತ್ತಿ, ಈರುಳ್ಳಿ, ಕೆಂಪು ಮೆಣಿಸಿನಕಾಯಿ, ಜೋಳ ಹಾಗೂ ಮೆಕ್ಕೆಜೋಳ ಬೆಳೆಗಳಿಗೆ ಜುಲೈ 31 ಹಾಗೂ ಇತರೆ ಬೆಳೆಗಳಾದ ನವಣೆ, ಶೇಂಗಾ, ಭತ್ತ, ರಾಗಿ, ಹುರಳಿ ಬೆಳೆಗಳಿಗೆ ಆಗಸ್ಟ್ 16 ಕೊನೆಯ ದಿನವಾಗಿದೆ ಎಂದು ತಿಳಿಸಿದೆ.