ಜಿಲ್ಲೆ

ಮಂಗಳಮುಖಿಯರಿಗೆ ನಿವೇಶನ ಭಾಗ್ಯ; ಕಾಂಗ್ರೆಸ್ ಮುಖಂಡ ನಾರಾ ಭರತರೆಡ್ಡಿ ಘೋಷಣೆ


ತೃತೀಯ ಲಿಂಗಿಗಳಿಗೆ ಹುಡಿ ತುಂಬುವ ಕಾರ್ಯಕ್ರಮ

ಬಳ್ಳಾರಿ: 2023ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ ಬರಲಿದ್ದು, ಆಗ ಜಿಲ್ಲೆಯಲ್ಲಿರುವ ಮಂಗಳಮುಖಿಯರಿಗೆ ಸರ್ಕಾರದಿಂದ ನಿವೇಶನ ಕೊಡಿಸಲಾಗುವುದು ಎಂದು ಜಿಪಂ ಮಾಜಿ ಸದಸ್ಯ, ಟಚ್ ಫಾರ್ ಲೈಫ್ ಪೌಂಡೇಷನ್ ಸಂಸ್ಥಾಪಕ ನಾರ ಭರತರೆಡ್ಡಿ ಹೇಳಿದರು.

ನಗರದ ಸಂಗನಕಲ್ಲು ರಸ್ತೆಯ ಈ ಹಿಂದಿನ ನಳಂದಾ ಶಾಲೆಯ ಆವರಣದಲ್ಲಿ ಭಾನುವಾರ 101ಮಂಗಳಮುಖಿಯರಿಗೆ ಸೀರೆ, ಬೆಳ್ಳಿ ದೀಪ, ಕುಂಕುಮ ಕೊಡುವ ಮೂಲಕ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಒಂದು ವೇಳೆ ಸರ್ಕಾರದಿಂದ ಕೊಡದಿದ್ದರೆ ತನ್ನ ಸ್ವಂತ ಖರ್ಚಿನಲ್ಲಿಯಾದರೂ ಕೊಡುವುದಾಗಿ ಘೋಷಣೆ ಮಾಡಿದರು.

ಮಂಗಳಮುಖಿಯರು ಸಮಾಜದಲ್ಲಿ ಮುನ್ನಲೆಗೆ ಬಂದು, ಎಲ್ಲರಂತೆ ಬದುಕು ಸಾಗಿಸಬೇಕಿದೆ. ಅವರನ್ನು ಕೀಳದೃಷ್ಟಿಯಿಂದ ನೋಡುವ ಮನೋಭಾವ ಬಿಟ್ಟು, ಅವರನ್ನು ನಮ್ಮ ಗೆಳೆಯ-ಗೆಳತಿಯರಂತೆ ನೋಡಬೇಕಿದೆ. ಮಂಗಳಮುಖಿಯರ ಆರೋಗ್ಯದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಆರೋಗ್ಯ ವಿಮೆ ಮಾಡಿಸಿಕೊಡುವೆ ಎಂದರು.

ಪಾಲಿಕೆ ಸದಸ್ಯ ಮಿಂಚು ಶ್ರೀನಿವಾಸ, 17ನೇ ವಾರ್ಡ್‌ನ ಕಾಂಗ್ರೆಸ್ ಮುಖಂಡ ಹೊನ್ನಪ್ಪ, ಮಾಜಿ ಮೇಯರ್ ನಾಗಮ್ಮ, ಪಾಲಿಕೆ ಮಾಜಿ ಸದಸ್ಯೆ ಪರ್ವಿನ ಬಾನು ಇತರರು ಇದ್ದರು.