ಬಳ್ಳಾರಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣದ ತನಿಖೆ ವಿಚಾರ ಈ ಬೈಎಲೆಕ್ಷನ್ ಮೇಲೆ ಪರಿಣಾಮ ಬೀರಲ್ಲ.ಅದೆಲ್ಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುವಾರ ಅವರ ಹಗಲುಗನಸು ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತ ಬುಧವಾರ ನಗರದ ವಿವಿಧ ವಾರ್ಡ್‌ಗಳಲ್ಲಿ ಕೈಗೊಂಡಿದ್ದ ಪ್ರಚಾರದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಸಲೀಲೆ ಪ್ರಕರಣದ ತನಿಖೆ ಎಸ್‌ಐಟಿ ನಡೆಸುತ್ತಿದೆ. ತನಿಖೆ ನಂತರ ತಪ್ಪಿತಸ್ಥರು ಯಾರೆಂಬುದು ತಿಳಿಯಲಿದೆ. ಇದರಿಂದ ಎರಡು ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲ್ಲ. ದೇಶದಲ್ಲೇ ಕಾಂಗ್ರೆಸ್ ಧೂಳಿ ಪಟವಾಗಿದೆ. ಮಸ್ಕಿ, ಬಸವ ಕಲ್ಯಾಣ, ಬೆಳಗಾವಿಯಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಈ ಉಪ ಚುನಾವಣೆಯಲ್ಲಿ ಕೂಡ ಯಾವ ಜೋಡೆತ್ತು ಕೆಲಸ ವಾಡಲ್ಲ ಎಂದು ಸಿದ್ದು-ಡಿಕೆಶಿಗೆ ರಾಮುಲು ಟಾಂಗ್ ನೀಡಿದರು.
ವಿಜಯೇಂದ್ರ ಎಲ್ಲಿಗೆ ಬರ್ತಾರೆ ಅಲ್ಲೆಲ್ಲ ಹಣ ಎಂಬ ಸಿದ್ದು ಹೇಳಿಕೆಗೆ ತಿರುಗೇಟು ನೀಡಿದ ರಾಮುಲು, ವಿಜಯೇಂದ್ರ ಅವರದು ತಪ್ಪೇನಿದೆ? ಅವರ ತಂದೆ ರಾಜಕಾರಣದಲ್ಲಿ ಇರುವ ಕಾರಣಕ್ಕೆ ತಂದೆಗೆ ಮಗ ಸಹಾಯ ವಾಡೋದು ತಪ್ಪಾ?ಇದನ್ನು ಸಹಿಸದೆ ವಿನಾಕಾರಣ ಹಣದ ಮೂಲಕ ಆರೋಪ ಮಾಡೋದು ಯಾರಿಗೂ ಶೋಭೆ ತರುವದಿಲ್ಲ. ಶಿರಾ, ರಾಜರಾಜೇಶ್ವರಿಯಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಗೆದ್ದಿದೆ. ಹೀಗಾಗಿ ಉಪಚುನಾವಣೆಯಲ್ಲಿ ಜನರ ದಿಕ್ಕು ತಪ್ಪಿಸಲು ಈ ರೀತಿ ಆರೋಪ ವಾಡುತ್ತಿದ್ದಾರೆ ಎಂದರು.