ಬಳ್ಳಾರಿ : ಇತ್ತೀಚೆಗೆ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದು ಪ್ರಕರಣ ಖಂಡಿಸಿ, ಇಲ್ಲಿನ ಗಡಗಿ ಚೆನ್ನಪ್ಪ ವೃತ್ತದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಬುಧವಾರ ಪ್ರತಿಭಟಿಸಲಾಯಿತು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣಪಾಲ್ ಐನಾಥ್‌ರೆಡ್ಡಿ ಮಾತನಾಡಿ, ಚಾಮರಾಜಪೇಟೆಯಲ್ಲಿ ಹಸು ಕೆಚ್ಚಲು ಕೊಯ್ದ ಪ್ರಕರಣದ ದುರ್ಷಮ್ಕಿಗಳನ್ನು ಕೂಡಲೇ ಬಂಧಿಸಿ, ರಾಜ್ಯ ಸರ್ಕಾರ ಕಠಿಣ ಶಿಕ್ಷೆ ವಿಧಿಸಬೇಕು. ಸಚಿವ ಜಮ್ಮೀರ್ ಆಹ್ಮದ್ ಕ್ಷೇತ್ರದಲ್ಲಿಯೇ ಹೀಗಾದರೂ ಗಂಭೀರವಾಗಿ ಪರಿಗಣಿಸದವರು ಜಿಲ್ಲೆಯನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ. ಜಿಲ್ಲಾ ಉಸ್ತುವಾರಿ ವಹಿಸಿಕೊಂಡು ಅರು ತಿಂಗಳಾದರೂ ಒಮ್ಮೆಯೂ ತಿರುಗಿ ನೋಡಿಲ್ಲ. ಇಂತಹವರು ಜಿಲ್ಲೆಗೆ ಉಸ್ತುವಾರಿ ಆಗಿರುವುದು ನಮ್ಮ ದೌರ್ಬಲ್ಯವಾಗಿದೆ ಎಂದು ಕಿಡಿಕಾರಿದರು.
ನಂತರ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಸುಗಳಿಗೆ ಪೂಜೆ ಸಲ್ಲಿಸಿ, ಸಚಿವ ಜಮೀರ್ ಅಹ್ಮದ್ ಭಾವಚಿತ್ರಕ್ಕೆ ಗೋ ಮೂತ್ರ ಹಾಕಿ, ಸಗಣಿ ಎರಚಿ ಆಕ್ರೋಶ ವ್ಯಕ್ತಪಡಿಸಿದರು. ಸಚಿವರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.