ಜಿಲ್ಲೆ

ಕರ್ತವ್ಯ ಸ್ಥಳ ಬದಲಾವಣೆಗೆ ಬಿಜೆಪಿ ಪತ್ರ

ಬಳ್ಳಾರಿ : ಸಂಡೂರು ಉಪಚುನಾವಣೆ ಪಾರದರ್ಶಕತೆಯ ದೃಷ್ಠಿಯಿಂದ ಕ್ಷೇತ್ರದ ವ್ಯಾಪ್ತಿಯ ವಿವಿಧ ಇಲಾಖೆಗಳ ಒಂಬತ್ತು ಅಧಿಕಾರಿ - ನೌಕರರ ಕರ್ತವ್ಯ ಸ್ಥಳ ಬದಲಾವಣೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಘಟಕವು ರಾಜ್ಯ ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಿದೆ.

ಒಟ್ಟು ಒಂಬತ್ತು ಮಂದಿ ಅಧಿಕಾರಿ - ನೌಕರರ ಕರ್ತವ್ಯದ ಸ್ಥಳ ಬದಲಾವಣೆ ಮಾಡುವಂತೆ ಚುನಾವಣಾಧಿಕಾರಿಯೂ ಜಿಲ್ಲಾಧಿಕಾರಿಗಳಿಗೆ ಇತ್ತೀಚೆಗೆ ಜಿಲ್ಲಾ ಬಿಜೆಪಿ ಘಟಕ ಮನವಿ ಮಾಡಿತ್ತು. ಆದರೆ, ಈ ಮನವಿಯನ್ನು ತಳ್ಳಿ ಹಾಕಿದ್ದ ಚುನಾವಣಾಧಿಕಾರಿ ಕರ್ತವ್ಯ ಸ್ಥಳ ಬದಲಾವಣೆಗೆ ನಿರಾಕರಿಸಿದ್ದರು ಎನ್ನಲಾಗಿದೆ. ಸದ್ಯ ವಿಷಯವನ್ನು ಮುಖ್ಯ ಚುನಾವಣಾಧಿಕಾರಿ ಹಂತಕ್ಕೆ ಬಿಜೆಪಿ ತಂದಿದೆ. ಜಿಲ್ಲಾ ಚುನಾವಣಾಧಿಕಾರಿಯ ಕ್ರಮವನ್ನು ಕಾನೂನು ಬಾಹಿರ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದೆ. ನಿರ್ದಿಷ್ಟ ನೌಕರರ ಕರ್ತವ್ಯ ಸ್ಥಳ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದೆ.