ಜಿಲ್ಲೆ

ಬಳ್ಳಾರಿ ಬೀಜಿಂಗ್ ನಂತೆ ಮಾಡುವ ಕನಸು

ಸಂಡೂರು: ಬಳ್ಳಾರಿ‌ಯನ್ನು ಚೀನಾದ ಬೀಜಂಗ್ ನಂತೆ ಅಭಿವೃದ್ಧಿ ಮಾಡುವ ನನ್ನ ಕನಸಾಗಿದೆ ಎಂದು ಶಾಸಕ ಜನಾರ್ಧನರೆಡ್ಡಿ ಹೇಳಿದ್ದಾರೆ.

ತಾಲೂಕಿನ ಚೋರನೂರಿನಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಿಮಿತ್ತ ಭಾನುವಾರ ನಡೆದ  ಬಿಜೆಪಿ ಯುವ ಸಮಾವೇಶದಲ್ಲಿ ಮಾತನಾಡಿದರು.

ಚೀನಾಕ್ಕೆ ಬೀಜಿಂಗ್‌ ಭಾರತಕ್ಕೆ ಬಳ್ಳಾರಿ ಬೀಜಿಂಗ್ ಆಗಬೇಕು ಅನ್ನೋ ಕನಸು ನನ್ನದು. ಪ್ರತಿ ಮನೆಯ ಯುವಕನಿಗೆ ಉದ್ಯೋಗ ಸಿಗಬೇಕು. ಜನಾರ್ಧನರೆಡ್ಡಿ ಮಾತು ಕೊಟ್ರೆ ತಪ್ಪಲ್ಲ. ನನ್ನ ಪ್ರಾಣ ಕೊಡ್ತೇನೆ ಹೊರತು ಮಾತು ತಪ್ಪಲ್ಲ. ಸಂಡೂರು ಹೊಸಪೇಟೆ ಬಳ್ಳಾರಿ ನಡುವೆ 50 ಸಾವಿರ ಎಕರೆಯಲ್ಲಿ ಜಿಂದಾಲ್ ನಂತಹ ಹತ್ತು ಕಾರ್ಖಾನೆಗಳು ಬರಬೇಕು. ಪ್ರತಿಯೊಬ್ಬರ ಮನೆಯಲ್ಲಿ ಕೆಲಸ ಸಿಗಬೇಕು. ಹತ್ತು ವರ್ಷಗಳ ನಂತರ ಯಾರಾದರೂ ಒಬ್ವರು ಉದ್ಯೋಗ ಇಲ್ಲ ಅಂತಾ ಹೇಳಿದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದರು.

ಹದಿನಾಲ್ಕು ವರ್ಷದ ಹಿಂದೆ 2008ರಲ್ಲಿ ಅಖಂಡ ಜಿಲ್ಲೆಯ ಹತ್ತು ಕ್ಷೇತ್ರದ ಪೈಕಿ ಒಂಭತ್ತಲ್ಲಿ ಗೆದ್ದು ಸಂಡೂರು ಸೋತಿದ್ದೇವೆ. ಈ ಬಾರಿ ಸಂಡೂರು ಗೆಲ್ಲಲು ಅಂಜನಾದ್ರಿಯ ಹನುಮಂತ ನನಗೆ ಶಾಸಕನಾಗಿ ಮಾಡಿ ಬಳ್ಳಾರಿಗೆ ಕಳುಹಿಸಿದ್ದಾರೆ. ಬಳ್ಳಾರಿ ಅಭಿವೃದ್ಧಿಗೆ ಕನಸು ಕಂಡವನು ನಾನು. ಬಳ್ಳಾರಿ ಖನಿಜ ಸಂಪತ್ತು ರಾಜ್ಯದಲ್ಲಿ ಉಪಯೋಗ ಮಾಡುವ ಬಗ್ಗೆ ಚಿಂತನೆ ಇತ್ತು. ಬಳ್ಳಾರಿ ಅಭಿವೃದ್ಧಿಗೆ ಯಡಿಯೂರಪ್ಪ ಸಹಕಾರ ನೀಡಿದರು. ಸಂಡೂರಿನಲ್ಲಿ ಆಸ್ಪತ್ರೆ, ರಸ್ತೆ, ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ, ಹೀಗೆ ಹತ್ತು ಹಲವು ಕನಸು ಕಂಡಿದ್ದೇ . ಕುತಂತ್ರದಿಂದ ನನ್ನನ್ನು ಬಳ್ಳಾರಿಯಿಂದ ದೂರ ಇಡೋ ಕೆಲಸ ಮಾಡಿದರು. ನನ್ನ ಹಿಂದಿನ ಜನ್ಮದ ಕರ್ಮ ಈಗ ನಾನು ಬಳ್ಳಾರಿಯಿಂದ ದೂರ ಇಡುವಂತೆ ಅಯ್ತು. ನನಗೆ ತೊಂದರೆ ಕೊಟ್ಟವರು ಸದ್ಯ ( ಸಿದ್ದರಾಮಯ್ಯ) ಕಷ್ಟದಲ್ಲಿದ್ದಾರೆ. ಸೋತಿರೋ ಸಂಡೂರಿನಿಂದ ಗೆಲುವು ಪ್ರಾರಂಭ ಮಾಡಿ 2028ರಲ್ಲಿ 150 ಕ್ಷೇತ್ರದಲ್ಲಿ ಗೆಲ್ತೇವೆ. ಇದಕ್ಕೆ ಸಂಡೂರಿನಿಂದ ಅಡಿಪಾಯ ಹಾಕಬೇಕಿದೆ. ಬಿಜೆಪಿಯನ್ನು ಈ ಬಾರಿ ಗೆಲಿಸಿ ಕ್ಷೇತ್ರದ ಹಳ್ಳಿಗಳ ಅಭಿವೃದ್ಧಿ ಕಾಣಿರಿ ಎಂದು ಭರವಸೆ ನೀಡಿದರು.

ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ಕೃಷ್ಣ ನಾಯ್ಕ, ಅರವಿಂದ ಬೆಲ್ಲದ, ಸಂಸದ ಬಿ.ಶ್ರೀರಾಮಲು, ಮಾಜಿ ಸಂಸದ ಫಕೀರಪ್ಪ, ಮಾಜಿ ಶಾಸಕರಾದ ಸೋಮಲಿಂಗಪ್ಪ, ರಾಮಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ನವೀನ್ ಕುಮಾರ್, ರಾಜ್ಯ ಕಾರ್ಯದರ್ಶಿ ದಿವಾಕರ, ಬಿಜೆಪಿ ಅಭ್ಯಾರ್ಥಿ ಬಂಗಾರ ಹನುಮಂತು, ವಿಜಯನಗರ ಜಿಲ್ಲಾಧ್ಯಕ್ಷ ಚನ್ಮಬಸವನಗೌಡ, ಬಳ್ಳಾರಿ ಜಿಲ್ಲಾಧ್ಯಕ್ಷ ಅನಿಲ್ ಮೋಕ, ಬಳ್ಳಾರಿ ಪಾಲಿಕೆ ಸದಸ್ಯ ಗೋವಿಂದ ರಾಜು ಇತರರಿದ್ದರು.

ಸಂಡೂರು ಸಿಪಿಐ ಮಹೇಶಗೌಡ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆ. ಸಿಬಿಐ ಅಧಿಕಾರಿಗಳನ್ನೇ ನೋಡಿರುವ ನಾನು ಇಂತಹ ಅಧಿಕಾರಿಗಳ ಕುತಂತ್ರ ಬಲ್ಲೆ. ಅವರಿಗೆ ಹೇಳಿರುವೆ ನಿಮ್ಮ ಈ ನಡೆ ಸರಿಯಲ್ಲ ಎಂದು. ಅವರು ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ನಾನು ಯಾರೆಂದು ತೋರಿಸುವೆ. ಜನಾರ್ಧನರೆಡ್ಡಿ, ಶಾಸಕ