ಜಿಲ್ಲೆ

ಆರೋಪಿತರ ಬಂಧನ, 2.30 ಲಕ್ಷ ರೂ. ವಶ

ಬಳ್ಳಾರಿ : ನಕಲಿ ಬಂಗಾರ ನಾಣ್ಯ ನೀಡಿ ನಗದು ಹಣ ಪಡೆದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 2.30 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.

ಸಂಡೂರು ತಾಲೂಕಿನ ಕೊರಚರಹಟ್ಟಿಯ ನಿವಾಸಿಗಳಾದ ವೆಂಕಟೇಶ್, ಶಿವಕುಮಾರ ಬಂಧಿತರು. ನಗರದಲ್ಲಿ ಈ ಇಬ್ಬರು ಆರೋಪಿಗಳು ವಿವಿಧಡೆ ನಕಲಿ ಬಂಗಾರ ನಾಣ್ಯ ನೀಡಿ ನಗದು ಪಡೆದು ವಂಚಿಸಿದ್ದರು. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ವೇಳೆ ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ. ಈ ಕುರಿತು ಕೌಲಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚಾರಣೆಯಲ್ಲಿ ಭಾಗವಹಿಸಿದ ಪೊಲೀಸ್ ತಂಡಕ್ಕೆ ಎಸ್ಪಿ ಡಾ.ವಿ.ಜೆ. ಶೋಭಾರಾಣಿ ವ್ಯಕ್ತಪಡಿಸಿದ್ದಾರೆ.