ಜಿಲ್ಲೆ

ಅರ್ಜಿ ಆಹ್ವಾನ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಜಿಲ್ಲೆಯಲ್ಲಿನ ಪರಿಶಿಷ್ಟ ಜಾತಿಯ 2025-26ನೇ ಸಾಲಿನ 50 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಷ್ಠತ ಶಾಲೆಗಳಲ್ಲಿ 6 ನೇ ತರಗತಿ ಪ್ರವೇಶಕ್ಕೆ ಅರ್ಹತಾ ಪರೀಕ್ಷೆಯ ಮೂಲಕ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಪ್ರತಿಷ್ಠಿತ ಶಾಲೆಗಳಾದ ಶ್ರೀವಿಶ್ವೇಶ್ವರಯ್ಯ ಫ್ರೌಢ ಶಾಲೆ ಅಲ್ಲೀಪುರ (ಬೆಸ್ಟ್ ಸ್ಕೂಲ್), ಶ್ರೀನಂದ ವಸತಿ ಶಾಲೆ ವಿದ್ಯಾನಗರ, ಶ್ರೀನಂದಿ ಫ್ರೌಢಶಾಲೆ (ಸಿಬಿಎಸ್‌ಇ) ಬೆಳಗಲ್ ಕ್ರಾಸ್, ವಿಜಯಮೇರಿ ಪ್ರಾಥಮಿಕ ಶಾಲೆ ಸಿರುಗುಪ್ಪ (ವಸತಿ ಸಹಿತ), ಬೃಂದಾ ಇಂಟರ್ ನ್ಯಾಷನಲ್ ಸ್ಕೂಲ್ ದಮ್ಮೂರು(ವಸತಿ ಸಹಿತ) ಶಾಲೆಗಳಿಗೆ ಏ.15 ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರವೇಶ ಪರೀಕ್ಷೆ ಬರೆಯಲು ಇಚ್ಛಿಸುವ ಪರಿಶಿಷ್ಟ ಜಾತಿಯ ಅರ್ಹ ವಿದ್ಯಾರ್ಥಿಗಳು ಅರ್ಜಿಗಳನ್ನು ಸಮಾಜ ಕಲ್ಯಾಣಧಿಕಾರಿಗಳ ಕಚೇರಿಯಲ್ಲಿ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಲು ಮೇ.03 ಕೊನೆಯ ದಿನವಾಗಿದೆ. ಮಾಹಿತಿಗೆ ದೂ.08392-244738, ಮೊ.9480843073 ಅಥವಾ ಅಂಬೇಡ್ಕರ್ ಭವನದ ಸಮಾಜ ಕಲ್ಯಾಣಧಿಕಾರಿಗಳ ಕಚೇರಿಗೆ ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

--------------