ಜಿಲ್ಲೆ

ಆಂಧ್ರದ ಆನಂದಯ್ಯನ ನಾಟಿ ಔಷಧ ವಿತರಣೆಗೆ ಬ್ರೇಕ್: ಬಳ್ಳಾರಿಯಲ್ಲಿ ಡಿಎಚ್‌ಒ ಜನಾರ್ದನ್ ಮಾಹಿತಿ

ಬಳ್ಳಾರಿ: ಸರ್ಕಾರ ಕರೊನಾಗೆ ಪರ್ಯಾಯ ಔಷಧಕ್ಕೆ ಈವರೆಗೆ ಯಾವುದೇ ಅನುಮತಿ ನೀಡಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಯಾವುದೇ ತರಹದ ಕರೊನಾ ಔಷಧ ವಿತರಣೆ ಮಾಡಕೂಡದು ಎಂದು ಡಿಎಚ್‌ಒ ಎಚ್.ಎಲ್.ಜನಾರ್ದನ್ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರದ ಆನಂದಯ್ಯ ನಾಟಿ ಔಷಧವನ್ನು ನಗರದ ಬೆಳಗಲ್ ಕ್ರಾಸ್‌ನ ರಾಮಾಂಜನೇಯ ದೇವಾಲಯದಲ್ಲಿ ಹಂಪಿಯ ಗೋವಿಂದಾನಂದ ಸ್ವಾಮೀಜಿ ಜಿಲ್ಲಾಡಳಿತ ಮತ್ತು ಆಯುಷ್ ಇಲಾಖೆಗೆ ಮಾಹಿತಿ ನೀಡದೆ ನಾಟಿ ಔಷಧ ವಿತರಿಸಲಾಗುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಅಲ್ಲದೆ ಹೀಗಾಗಿ ಜಿಲ್ಲೆಯ ಎಲ್ಲ ತಾಲೂಕಿನ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ತಾತ್ಕಾಲಿಕವಾಗಿ ತಡೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.