ಜಿಲ್ಲೆ

ವೈದ್ಯರ ನಿರ್ಲಕ್ಷದಿಂದ ಬಾಣಂತಿ ಮೃತ ಆರೋಪ

ಬಳ್ಳಾರಿ : ಇಲ್ಲಿನ ಬಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ವೈದ್ಯರ ನಿರ್ಲಕ್ಷೃದಿಂದ ಬಾಣಂತಿಯೊಬ್ಬರು ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಕೂಡ್ಲಿಗಿ ತಾಲೂಕಿನ ಹಾಲಸಾಗರ ಗ್ರಾಮದ ಮಹಾಲಕ್ಷ್ಮೀ (20) ಮೃತ. ಹೆರಿಗೆಗಾಗಿ ನಗರದ ಬಿಮ್ಸ್ ಆಸ್ಪತ್ರೆಗೆ ನ.24 ರಂದು ದಾಖಲಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವಯಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕಳೆದ ಮೂರು ದಿನಗಳಿಂದ ತೀವ್ರ ಚಿಕಿತ್ಸಾ (ಐಸಿಯು) ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಆದರೆ, ವೈದ್ಯರ ನಿರ್ಲಕ್ಷೃತನದಿಂದ ಬಾಣಂತಿ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇತ್ತೀಚೆಗೆ ಕೆಲ ದಿನಗಳ ಹಿಂದೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಒಳಾಗದ ನಾಲ್ವರು ಬಾಣಂತಿಯರಿಗೆ ಸೋಂಕು ತಗುಲಿ ಇಬ್ಬರು ಜಿಲ್ಲಾಸ್ಪತ್ರೆ, ಬಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲಾಸ್ಪತ್ರೆಯ ಸರಣಿ ಸಾವಿನ ಘಟನೆ ಮಾಸುವ ಮುನ್ನವೇ ಮತ್ತೊಬ್ಬರು ಬಿಮ್ಸ್ ನಲ್ಲಿ ಮೃತಪಟ್ಟಿರುವುದು ಸಾರ್ವಜನಿಕರಲ್ಲಿ ಅತಂಕ ಮೂಡಿಸಿದೆ.

ಕೋಟ್... ಬಿಮ್ಸ್ ಹೆರಿಗೆಗೆ ಆಗಮಿಸುವ ಮುನ್ನವೇ ಕೂಡ್ಲಿಗಿ ತಾಲೂಕು ಕೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಅಲ್ಲಿಂದ ಇಲ್ಲಿಗೆ ಕಳುಹಿಸುವೆ ವೇಳೆ ಆರೋಗ್ಯದಲ್ಲಿ ಕೂಡ ಏರುಪಾರಾಗಿತ್ತು. ಮೃತ ಮಹಾಲಕ್ಷ್ಮೀಗೆ ಅನಿಮಿಯಾ ಕಾಯಿಲೆ ಇರುವುದರ ಬಗ್ಗೆ ಆರಂಭದಲ್ಲಿಯೇ ಕುಟುಂಸ್ಥರಿಗೆ ತಿಳಿಸಲಾಗಿತ್ತು. ಬಾಣಂತಿಯ ಪ್ರಾಣ ಉಳಿಸಲು ವೈದ್ಯರು ಶಕ್ತಿ ಮೀರಿ ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ .

- ಡಾ.ಟಿ.ಗಂಗಾಧರಗೌಡ, ನಿರ್ದೇಶಕ, ಬಿಮ್ಸ್, ಬಳ್ಳಾರಿ.

=======