ಜಿಲ್ಲೆ

ನಟ ಕಮಲ್‌ಹಾಸನ್ ಹೇಳಿಕೆ ಖಂಡನೀಯ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ತಮಿಳು ಚಿತ್ರನಟ ಕಮಲ್‌ಹಾಸನ್ ಕನ್ನಡದ ಬಗ್ಗೆ ಅವಹೇಳನ ಹೇಳಿಕೆ ಖಂಡಿಸಿ ಹಾಗೂ ಅವರ ನಟನೆಯ ಥಗ್ ಆಫ್ ಲೈಫ್ ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆಗೊಳಿಸದಂತೆ ಆಗ್ರಹಿಸಿ ಇಲ್ಲಿನ ಗಡಗಿ ಚೆನ್ನಪ್ಪ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧ್ಯಕ್ಷ ಅಂಗಡಿ ಶಂಕ್ರಪ್ಪ ಮಾತನಾಡಿ, ತಮಿಳು ನಟ ಕಮಲ್‌ಹಾಸನ್‌ನವರು ವಿವಾದಾತ್ಮಕ ಹೇಳಿಕೆ ನೀಡಿರುವುದು ನಿಜಕ್ಕೂ ಖಂಡನೀಯವಾಗಿದೆ. ನಟ ಕಮಲ್‌ಹಾಸನ್ ಇಡೀ ಕರ್ನಾಟಕ ಜನತೆಗೆ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಕರ್ನಾಟಕದಲ್ಲಿ ಅವರ ನಟನೆಯ ಥಗ್ ಆಫ್ ಲೈಫ್ ಸಿನಿಮಾ ಪ್ರದರ್ಶನವನ್ನು ತಡೆಯಲಾಗುವುದು. ಈ ಚಿತ್ರದ ವಿತರಕರು ತಮ್ಮ ಹೂಡಿದ ಬಂಡವಾಳ ರಕ್ಷಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿ ಮೆರವಣಿಗೆ ನಡೆಸಿ ಕಮಲ್‌ಹಾಸನ್ ವಿರುದ್ಧ ಕ್ರಮ ಜರುಗಿಸುವಂತೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.