ಜಿಲ್ಲೆ

ಅ. 24 ಬಳಿಕ ನಿರ್ಧಾರ ತಿಳಿಸುವೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಸಂಡೂರು ಉಪ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಫರ್ಧಿಸುವುದರ ಬಗ್ಗೆ ಅ. 24 ರ ಬಳಿಕ ನಿರ್ಧಾರ ತಿಳಿಸಲಾಗುವುದು ಎಂದು ಬಿಜೆಪಿ ‌ಮುಖಂಡ ಕೆ.ಎಸ್. ದಿವಾಕರ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಯಿಂದ 2018 ರಿಂದ ಈವರೆಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಬೇಸರ ವ್ಯಕ್ತಪಡಿಸಿದರು. ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ಜತೆ ಚರ್ಚಿಸಿದ್ದು, ಸಮಾಧಾನದ ಮಾತುಗಳನ್ನು ಹೇಳಿದ್ದಾರೆ ಎಂದರು.

ಈಗಾಗಲೇ ಕಾಂಗ್ರೆಸ್ ‌ನಾಯಕರು ಸಂಪರ್ಕದಲ್ಲಿದ್ದು, ಸಂಡೂರಿನಲ್ಲಿ ಸಭೆ ನಡೆಸಿ ಬೆಂಬಲಿಗರ ನಿರ್ಧಾರಕ್ಕೆ ಬದ್ಧನಾಗಿವೆ. ಕೆಲ ವರ್ಷಗಳ ಹಿಂದೆ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ಟಿಕೆಟ್ ಸಿಗುತ್ತಿತ್ತು. ಆದರೆ, ಈಗ ರಾಷ್ಟ್ರೀಯ ಪಕ್ಷ ಅದ ಬಳಿಕ ಏನು ಆಗಿದೆ ಎಂಬುದು ತಿಳಿಯುತ್ತಿಲ್ಲ ಎಂದು ಬಿಜೆಪಿ ವಿರುದ್ಧ ಅಸಮಾಧಾನ ಹೊರ ಹಾಕಿದರು.