ಬಳ್ಳಾರಿ : ಭೂ ಸಂತ್ರಸ್ತ ಹೋರಾಟಗಾರರ ಜತೆ ಜ.09 ರಂದು ಡಿಸಿ ನೇತೃತ್ವದಲ್ಲಿ ರೈತರೊಂದಿಗೆ ಕಾನೂನಾತ್ಮಕ ಸಭೆ ನಡೆಸಲಾಗುವುದು ಎಂದು ಎಸಿ ಪ್ರಮೋದ್ ಹೇಳಿದರು.
ಕುಡಿತಿನಿ ಪಟ್ಟಣದಲ್ಲಿ ಭೂ ಸಂತ್ರಸ್ತ ರೈತರು ಹಮ್ಮಿಕೊಂಡಿರುವ ಪ್ರತಿಭಟನ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಮಾತನಾಡಿದರು. 752 ದಿನಗಳಿಂದ ಹೋರಾಟ ನಡೆಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈಗಾಗಲೇ ಸಿಎಂ ನೇತೃತ್ವದಲ್ಲಿ ಒಂದು ಬಾರಿ ಸಭೆ ನಡೆಸಿ ಚರ್ಚಿಸಲಾಗಿದೆ. ಮತ್ತೊಮ್ಮೆ ಸಿಎಂ ಬಳಿ ಚರ್ಚಿಸಿ ಶಾಶ್ವತ ಪರಿಹಾರ ಕಲ್ಪಿಸಲು ಈ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.