ಜಿಲ್ಲೆ

21 ಸಾವಿರ ಪ್ರಮಾಣ ಪತ್ರ ಪರಿಶೀಲನೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಕುಲಪತಿ ಸಹ ನಕಲು ಮಾಡಿ ನೂರಾರು ಮಂದಿಗೆ ಘಟಿಕೋತ್ಸವದಲ್ಲಿ ನಕಲಿ ಪ್ರಮಾಣ ಪತ್ರ ನೀಡಿರುವುದಕ್ಕೆ ಸಂಬಂಧಿಸಿದಂತೆ ವಿವಿಯ ತನಿಖಾ ತಂಡವು ಈವರೆಗೆ 21 ಸಾವಿರ ಪ್ರಮಾಣ ಪತ್ರಗಳನ್ನು ಪರಿಶೀಲಿಸಿದೆ.

ಪ್ರತಿಯೊಂದು ಪ್ರಮಾಣಪತ್ರದ ಕ್ರಮಸಂಖ್ಯೆಗಳನ್ನು ಪರಿಶೀಲಿಸುತ್ತಿರುವ ತನಿಖಾ ತಂಡ, ಅನುಮಾನ ಕಂಡು ಬಂದ ಪ್ರಮಾಣ ಪತ್ರದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈವರೆಗೂ ಒಂದು ಸಾವಿರಕ್ಕೂ ಹೆಚ್ಚು ನಕಲಿ ಪ್ರಮಾಣ ಪತ್ರಗಳು ಸಿಕ್ಕಿವೆ. ಒಂದು ಪ್ರಮಾಣ ಪತ್ರಕ್ಕೆ ಹತ್ತು ರೂ. ಸಾವಿರ ಸಂಗ್ರಹಿಸಿದ್ದರೂ ಒಂದು ಕೋಟಿ ರೂ. ಅವ್ಯವಹಾರ ನಡೆದಿರುವ ಸಾಧ್ಯತೆಯಿದೆ ಎನ್ನಲಾಗಿದೆ.