ಜಿಲ್ಲೆ

ಹಲ್ಲೆಗೊಳಗಾಗಿದ್ದ ಯುವಕ ಮೃತ್ಯು

Dakshina Kannada

ಸುಳ್ಯ: ಕಳಂಜದಲ್ಲಿ ಗುಂಪು ಹಲ್ಲೆಗೊಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಸೂದ್(19) ಗುರುವಾರ ಮೃತ ಪಟ್ಟಿದ್ದಾರೆ.

ಕಳಂಜದಲ್ಲಿ ಯುವಕರ ತಂಡವೊಂದು ಮಸೂದ್ ಮೇಲೆ ಮಂಗಳವಾರ ರಾತ್ರಿ ಬಾಟಲಿಯಿಂದ ಹಲ್ಲೆ ನಡೆಸಿತ್ತು. ಗಂಭೀರ ಗಾಯಗೊಂಡ ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 8ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಯುತ್ತಿದೆ.