ಜಿಲ್ಲೆ

ವಿಜಯೇಂದ್ರ ನೇಮಕಕ್ಕೆ ಬೆಲ್ಲದ ಮೌನ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕಗೊಂಡಿರುವುದಕ್ಕೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅಸಮಾಧನಗೊಂಡಂತೆ ಕಾಣುತ್ತಿದೆ.

ವಿಜಯೇಂದ್ರ ನೇಮಕಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳು ಶಾಸಕ ಅರವಿಂದ ಬೆಲ್ಲದ ಅವರ ಪ್ರತಿಕ್ರಿಯೆಗೆ ಮುಂದಾದಾಗ, ಬೆಲ್ಲದ ಅವರು ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿಯೇ ಕಾರು ಹತ್ತಿ ಹೊರಟುಹೋದರು. ಫೋನ್ ಮೂಲಕ ಸಂರ್ಪಸಿದರೂ, ‘ನೋ ಕಾಮೆಂಟ್ಸ್’ ಅಂತಷ್ಟೇ ಹೇಳಿ, ಕರೆ ಕಟ್ ಮಾಡಿದರು.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸ್ಥಾನದ ರೇಸ್​ನಲ್ಲಿದ್ದ ಬೆಲ್ಲದ ಅವರಿಗೆ ಸಚಿವ ಸ್ಥಾನವೂ ದಕ್ಕಿರಲಿಲ್ಲ. ವಿಧಾನಸಭೆ ಪ್ರತಿಪಕ್ಷ ನಾಯಕ ಅಥವಾ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಅರವಿಂದ ಬೆಲ್ಲದ ಅವರ ಹೆಸರೂ ಕೇಳಿಬರುತ್ತಿತ್ತು. ಇದೀಗ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ತಪ್ಪಿರುವುದರಿಂದ ಬೆಲ್ಲದ ಸಹಜವಾಗಿ ಅಸಮಾಧಾನಗೊಂಡಂತೆ ಕಾಣುತ್ತಿದೆ.