ಜಿಲ್ಲೆ

ಆದಿಚುಂಚನಗಿರಿಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸೇರಿ ಮೂವರಿಗೆ ವಿಟಿಯು ಗೌರವ ಡಾಕ್ಟರೇಟ್ ಪ್ರಕಟ

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 23 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧಿಪತಿ ಜಗದ್ಗುರು ಡಾ.ನಿರ್ಮಲಾನಂದನಾಥ ಸ್ವಾಮೀಜಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಗೌರವ ಕಾರ್ಯದರ್ಶಿ ಡಾ.ಎ.ವಿ.ಎಸ್.ಮೂರ್ತಿ ಹಾಗೂ ಮೈಸೂರು ಮೆರ್ಕ್ಯಾನ್ ಟೈಲ್ ಕಂಪನಿಯ ಎಂ.ಡಿ.ಎಚ್.ಎಸ್.ಶೆಟ್ಟಿ ಅವರಿಗೆ  'ಡಾಕ್ಟರ್ ಆಫ್ ಸೈನ್ಸ್ ' ಪದವಿ ಪ್ರದಾನ ಮಾಡಲಾಗುವುದು ಎಂದು ವಿಟಿಯು ಕುಲಪತಿ ಡಾ.ಎಸ್.ವಿದ್ಯಾಶಂಕರ ತಿಳಿಸಿದರು.

ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.1ರಂದು ಮಂಗಳವಾರ ವಿಶ್ವವಿದ್ಯಾಲಯದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, 550 ಪಿಎಚ್.ಡಿ ಸೇರಿದಂತೆ ಒಟ್ಟು 556 ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನಾ ಪದವಿ ಹಾಗೂ ಬಿಇ, ಬಿ.ಟೆಕ್ ನಲ್ಲಿ 42,545 ಹಾಗೂ ಬಿ.ಆರ್ಕ್ ವಿಭಾಗದಲ್ಲಿ 1,003 ಪದವಿಗಳನ್ನು ವಿತರಿಸಲಾಗುತ್ತಿದೆ ಎಂದರು.

ವಿವಿಧ ವಿಭಾಗಗಲ್ಲಿ ಪ್ರಥಮ ರ್ಯಾಂಕ್ ಪಡೆದು, ಅತ್ಯುತ್ತಮ‌ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನಹ ವಿತರಿಸಲಾಗುತ್ತಿದ್ದು, ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮದಕಶಿರಾ ಚಿನ್ಮಯ ವಿಕಾಸ್ 13 ಚಿನ್ನದ ಪದಕ, ಇದೇ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಅಭಿಷೇಕ ಜಿ.ಏಳು ಚಿನ್ನದ ಪದಕ ಹಾಗೂ ಎಲೆಕ್ಟ್ರಾನಿಕ್ಸ ಮತ್ತು ಕಮ್ಯುನಿಕೇಷನ್  ಇಂಜಿನಿಯರಿಂಗ್ ನಲ್ಲಿ ಗುಡಿಕಲ್ ಸಾಯಿ ವಂಶಿ ಹಾಗೂ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ನಲ್ಲಿ ಕೆ.ಆರ್.ಸಂಪತ್ ಕುಮಾರ್ ಏಳಿ ಪದಕಗಳನ್ನು ಪಡೆಯುವ ಮೂಲಕ‌ ಅತಿ ಹೆಚ್ಚು ಚಿನ್ನದ ಪದಕ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ ಎಂದು ವಿವರಿಸಿದರು.

ಇನ್ನು ಘಟಿಕೋತ್ಸವದ ಅಧ್ಯಕ್ಷತೆಯನ್ನುರಾಜ್ಯಪಾಲ ಥವಾರಚಂದ್ ಗೆಹ್ಲೋಟ್ ವಹಿಸಿಕೊಳ್ಳಲಿದ್ದಾರೆ.  ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಐಐಟಿಎಂನ ನಿರ್ದೇಶಕ ವಿ.ಕಾಮಕೋಟಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.‌