ಜಿಲ್ಲೆ

ಸ್ಮಾಟ ಸಿಟಿಯಿಂದ ಅಕ್ರಮ ಕಾಮಗಾರಿ; ಜಿಲ್ಲಾ ಆರೋಗ್ಯಾಧಿಕಾರಿಯಿಂದ ದೂರು

ಬೆಳಗಾವಿ : ಬೆಳಗಾವಿ ವ್ಯಾಕ್ಸಿನ್ ಡಿಫೋದಲ್ಲಿ ಆರೋಗ್ಯ ಇಲಾಖೆಯ ಅನುಮತಿ ಪಡೆಯದೇ ಸ್ಮಾರ್ಟ್ ಸಿಟಿಯಿಂದ ಅಕ್ರಮ ಕಾಮಗಾರಿ ನಡೆಸಲಾಗಿದೆ ಎಂದು ಆರೋಪಿಸಿ ಜಿಲ್ಲಾ ಆರೋಗ್ಯ ಅಧಿಕಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬೆಳಗಾವಿ ಸ್ಮಾರ್ಟ ಸಿಟಿ ನಿರ್ದೇಶಕರ ವಿರುದ್ಧ ಜಿಲ್ಲಾ  ಆರೋಗ್ಯಾಧಿಕಾರಿ ಡಾ.ಮಹೇಶ ಕೋಣಿ ಅವರು, ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಿದ್ದಾರೆ.
ಪರವಾಣಿಗೆ ಇಲ್ಲದೇ ತಮ್ಮ ಕಚೇರಿ ಆವರಣದಲ್ಲಿನ ಜಾಗದಲ್ಲಿ ಅಕ್ರಮ ಕಾಮಗಾರಿ,ಮಣ್ಣು, ಮರಕಡಿದು ಸಾಗಾಟ ಆರೋಪ
ದೂರಿನ ಮೇರೆಗೆ ಸ್ಮಾರ್ಟ ಸಿಟಿ ಎಂಡಿ ವಿರುದ್ಧ  420, 427,447 ಐಪಿಸಿ ಅಡಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಕಾಮಗಾರಿಯನ್ನು ಸ್ಥಗಿತಗೊಳಿಸಿ, ತನಿಖೆ ಮುಂದುವರಿಸಿದ್ದಾರೆ.
ಏನಿದು ವಿವಾದ?
ಆರೋಗ್ಯ ಇಲಾಖೆಯ ಜಿಲ್ಲಾ ಕಚೇರಿ ಹಾಗೂ ಲಸಿಕಾ ಕೇಂದ್ರವಿರುವ ವ್ಯಾಕ್ಸಿನ್ ಡಿಫೋದಲ್ಲಿ ಇತ್ತೀಚೆಗೆ ಬೆಳಗಾವಿ ಸ್ಮಾರ್ಟ್ ಸಿಟಿಯಿಂದ ಮರಗಳನ್ನು ತೆರುವುಗೊಳಿಸಿ, ಅಲ್ಲಿನ ಮಣ್ಣು ಸಾಗಿಸಿ, ವಿವಿಧ ಕಾಮಗಾರಿ ಮಾಡಲಾಗುತ್ತಿದೆ. ಆರಂಭದಲ್ಲಿಯೇ ಲ್ಲಿನ ಮರಗಳನ್ನು ತೆರುವುಗೊಳಿಸಿದ ಕಾರಣ ಅಲ್ಲಿ ಪಕ್ಷಿಗಳಿಗೆ ತೊಂದರೆಯಾಗುತ್ತಿದೆ ಎಂದು ಪರಿಸರವಾದಿಗಳಿಂದ ಸ್ಮಾರ್ಟ್ ಸಿಟಿ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೂ, ಸ್ಮಾರ್ಟ್ ಸಿಟಿ ಅಧಿಕಾರಿಗಳು ಮರಗಳ ತೆರವು ಕಾರ್ಯಾಚರಣೆ ನಡೆಯಿಸಿದ್ದಲ್ಲದೇ, ಅಲ್ಲಿನ ಮಣ್ಣು ಸಾಗಾಟ ಮಾಡಿ, ವಿವಿಧ ಕಾಮಗಾರಿ ನಡೆಸುತ್ತಿದ್ದರು.
ತಮ್ಮ ಇಲಾಖೆಗೆ ಸೇರಿದ ಜಾಗೆಯಲ್ಲಿ ಈ ಕಾಮಗಾರಿ ನಡೆಸುತ್ತಿರುವ ಬಗ್ಗೆ ತಮ್ಮ ಪರವಾನಗಿ ಪಡೆದಿಲ್ಲ ಎಂದು ಡಾ.ಮಹೇಶ ಕೋಣಿ ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಎಷ್ಟೇ ಕೇಳಿದರೂ, ಪ್ರತಿಕ್ರಿಯಿಸದೇ ಕಾಮಗಾರಿ ಆರಂಭಿಸಿದ್ದರಿಂದ ಜಿಲ್ಲಾ ಆರೋಗ್ಯಾಧಿಕಾರಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.