ಜಿಲ್ಲೆ

ಬೆಳಗಾವಿಗೆ ಬಂದ ಮಾಜಿ ಸಿಎಂ ಬೊಮ್ಮಾಯಿ ಪಡೆ

ಬೆಳಗಾವಿ : ಸಾರ್ವತ್ರಿಕ ವಿಧಾನ ಸಭೆ ಚುನಾವಣೆಯ ಸೋಲಿನ ಬಳಿಕ ಇದೇ ಮೊದಲ ಬಾರಿಗೆ ನಡೆಸಲಾಗುತ್ತಿರುವ ಬೆಳಗಾವಿ ಗ್ರಾಮಾಂತರ  ಮತ್ತು ಮಹಾನಗರ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಮಾಜಿ ಮಂತ್ರುಗಳ ದಂಡು ಬೆಳಗಾವಿಗೆ ಬಂದಿದೆ.

ಗಣ್ಯರನ್ನು ಸಂಜಯ ಪಾಟೀಲ ಬರಮಾಡಿಕೊಂಡರು

ವಿಶೇಷ ವಿಮಾನದಲ್ಲಿ ಭಾನುವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಮುರುಗೇಶ ನಿರಾಣಿ, ಬಸವನಗೌಡ, ಬೈರತಿ ಬಸವರಾಜ, ಪಾಟೀಲ ಯತ್ನಾಳ ಸೇರಿದಂತೆ ಪ್ರಮುಖ ನಾಯಕರನ್ನು ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಸ್ವಾಗತಿಸಿದರು.‌ ರಾಜ್ಯ ವಕ್ತಾರ ಎಂ.ಬಿ.ಜಿರಲಿ ಸೇರಿದಂತೆ ಇತರರಿದ್ದರು. ‌