ಜಿಲ್ಲೆ

ಕರೊನಾ ರೋಗಿಗಳ ಆರೈಕೆ ಮಾಡುತ್ತಿದ್ದ ಸ್ಟಾಫ್​ ನರ್ಸ್ ಕೊವೀಡ್​ಗೆ ಬಲಿ

Mandara

ಬೆಳಗಾವಿ: ಇಲ್ಲಿನ ಕೆಎಲ್ ​ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದ ಸ್ಟಾಫ್​​ ನರ್ಸ್​ಗೆ ಕರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾರೆ.

ಪ್ರಾಚಿ ಪ್ರೀತಂ ಕಿತ್ತೂರು(39) ಕರೊನಾಗೆ ಬಲಿಯಾದ ಸ್ಟಾಫ್​ ನರ್ಸ್​. ಅವರು ಕೆಎಲ್​ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸ್ಟಾಫ್​​ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ 15 ದಿನಗಳ ಹಿಂದೆ ಕರೊನಾ ಸೋಂಕು ದೃಢವಾಗಿತ್ತು. ಕೆಎಲ್​ಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆ ಅವರು ಕೊನೆಯುಸಿರೆಳೆದಿದ್ದಾರೆ.

ಪ್ರಾಚಿ ಪ್ರೀತಂ ಮೂಲತಃ ಗೋವಾದವರಾಗಿದ್ದು, 18 ವರ್ಷಗಳ ಹಿಂದೆ ಘಟಪ್ರಭಾಕ್ಕೆ ಬಂದು ಅಲ್ಲಿಯೇ ನೆಲಸಿದ್ದರು. ಪ್ರೀತಂ ಎನ್ನುವವರನ್ನ ಪ್ರೀತಿಸಿ ಮದುವೆಯಾಗಿದ್ದರು. ಅವರಿಗೆ ಒಂದು ಹೆಣ್ಣು ಮಗುವಿದೆ.