ಜಿಲ್ಲೆ

ದೊಡ್ಡತುಮಕೂರು ಗ್ರಾಪಂನಲ್ಲಿ ಅರಳಿದ ಕಮಲ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ದೂಡ್ಡಬೆಳವಂಗಲ
ಹೋಬಳಿಯ ದೊಡ್ಡತುಮಕೂರು ಗ್ರಾಪಂ ಅಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತೆ ಸರೋಜಾ ಮಂಜುನಾಥ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸವಿತಾ ರವಿಕುಮಾರ್ ಅವಿರೋಧ ಅಯ್ಕೆ ಮಾಡಲಾಯಿತು.
12 ಸದಸ್ಯ ಬಲದ ಪಂಚಾಯಿತಿಯಲ್ಲಿ ನಿಗದಿಯಾಗಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಂಗಶಾಮಯ್ಯ 5 ಮತ ಪಡೆದು ಪರಾಭವಗೊಂಡರು. ಬಿಜೆಪಿ ಬೆಂಬಲಿತೆ ಸರೋಜಾ ಮಂಜುನಾಥ್ 7 ಮತ ಪಡೆದು ವಿಜೇತರಾದರು. ಹಾಗೆಯೇ, ಉಪಾಧ್ಯಕ್ಷ ಸ್ಥಾನಕ್ಕೆ ಸವಿತಾ ರವಿಕುಮಾರ್ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.
ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕಿ ದಾಕ್ಷಾಯಿನಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿರುಪತಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಅಧ್ಯಕ್ಷೆ ಸರೋಜಾ ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ಮಾದರಿ ಗ್ರಾಪಂ ಆಗಿ ರೂಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.
ಡೇರಿ ಮಾಜಿ ಅಧ್ಯಕ್ಷ ಮುನಿಯಪ್ಪ, ಮುಖಂಡರಾದ ಟಿ.ಜಿ. ಮಂಜುನಾಥ್, ಮುನಿಗೋಪಾಲಪ್ಪ. ನಾರಾಯಣಸ್ವಾಮಿ ಇದ್ದರು.