ಮಲ್ಲಮ್ಮನ ಬೆಳವಡಿ: ಗ್ರಾಮಕ್ಕೆ ಭೇಟಿ ಈಚೆಗೆ ನೀಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ
ಕೆ.ವಿ.ಪ್ರಭಾಕರ ರಾಣಿ ಮಲ್ಲಮ್ಮಅವರ ಮೂರ್ತಿಗೆ ಸೋಮವಾರ ಮಲಾರ್ಪಣೆ ಮಾಡಿದರು.
ಈ ವೇಳೆ ವಿಶ್ವದಲ್ಲೇ ಮೊದಲ ಬಾರಿಗೆ ಮಹಿಳಾ ಸೈನ್ಯ ಕಟ್ಟಿದ ವೀರರಾಣಿ ಬೆಳವಡಿ ಮಲ್ಲಮ್ಮನ ಪ್ರಾಧಿಕಾರ ರಚಿಸುವಂತೆ ಆಗ್ರಹಿಸಿ ಮುಖಂಡರು ಕೆ.ವಿ.ಪ್ರಭಾಕರ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಕ್ರಿಯಿಸಿದ ಅವರು, ಮಲ್ಲಮ್ಮನ ಬೆಳವಡಿ ಗ್ರಾಮಸ್ಥರ ಬೇಡಿಕೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
ಮುಖಂಡರಾದ ಹಜರತಲಿ ಗೊರವನಹಳ್ಳ, ಬೆಳವಡಿ ಮಲ್ಲಮ್ಮ ಪ್ರಾಧಿಕಾರ ಹೋರಾಟ ಸಮಿತಿ ಅಧ್ಯ ಚಂದ್ರಶೇಖರ ಕಾರಿಮನಿ, ಉಪಾಧ್ಯ ಬಿ.ಜಿ.ದೇಗಾಂವಿ, ಕಾರ್ಯದರ್ಶಿ ಪ್ರಕಾಶ. ಹುಂಬಿ, ರಾಚಯ್ಯಸ್ವಾಮಿ ರೊಟ್ಟಯ್ಯನವರ, ವಿಠ್ಠಲ ಪಿಸೆ, ಪ್ರಕಾಶ ಕಾರಿಮನಿ, ಸುನೀಲ ವರ್ಣೇಕರ, ಮಹಾಂತೇಶ ಕರಿಕಟ್ಟಿ, ರಾಜು ಭರಮಗೌಡ್ರ, ಅಮೀರ ಹಾದಿಮನಿ, ರಂಜಾನ್ ನದಾ, ರೋಹಿತ ಕುಲಕರ್ಣಿ, ಹನುಮಂತ ಕಕ್ಕಯ್ಯನವರ, ಆನಂದ ದೇಗಾಂವಿ, ಗಂಗಪ್ಪ ರೇಶ್ಮಿ, ಸೈಯದ್ ದಿಲ್ಲುನಾಯ್ಕರ ಇತರರಿದ್ದರು.