ಬೆಳಗಾವಿಲಿ ಹೆರಾಯಿನ್ ಮಾರಾಟ ಮಾಡುತ್ತಿದ್ದವರ ಬಂಧಿಸಿದ ಪೊಲೀಸರು. 
ಬೆಳಗಾವಿ

ಹೆರಾಯಿನ್ ಮಾರಾಟ ಜಾಲ ಪತ್ತೆ

ಬೆಳಗಾವಿಲಿ ಇಬ್ಬರ ಬಂಧನ

ಹೆರಾಯಿನ್ ಮಾರಾಟ ಜಾಲ ಪತ್ತೆ
| ೧೪.೪೯ ಗ್ರಾಂ ಹೆರಾಯಿನ್ ಜಪ್ತಿ
ಬೆಳಗಾವಿ : ಇಲ್ಲಿನ ಹೆದ್ದಾರಿಯ ಪಕ್ಕದ ಜೈ ಕಿಸಾನ್ ಬಾಜಿ ಮಾರ್ಕೇಟ್ ಬಳಿ ನಿಷೇಽತ ಹೆರಾಯಿನ್ ಮಾರಾಟ ಮಾಡಲು ಯತ್ನಸಿದ ಅಲರವಾಡದ ಮಹಾಂತೇಶ ಅಂಬಿಗೇರ(೩೭) ಮತ್ತು ಹರಿ ಕಾಲೋನಿಯ ಆಕಾಶ ನಂದಿ(೨೮) ಎಂಬಾತರನ್ನು ನಗರ ಪೊಲೀಸ್‌ರು ಶನಿವಾರ ವಶಕ್ಕೆ ಪಡೆದು ೩ ಲಕ್ಷ ರೂ.ಮೌಲ್ಯದ ಹೆರಾಯಿನ್ ಜಪ್ತಿ ಮಾಡಿದ್ದಾರೆ.
ಆರೋಪಿತರು ಮಹಾರಾಷ್ಟçದ ಮಹಿಳೆಯೊರ್ವಳಿಂದ ಹೆರಾಯಿನ್ ಖರೀದಿಸಿ ತಂದು ನಗರದಲ್ಲಿ ಮಾರಾಟ ಮಾಡಲು ಪ್ರಯತ್ನಿಸಿದ ವೇಳೆ ಪೊಲೀಸ್‌ರ ದಾಳಿ ನಡೆಸಿ ಆರೋಪಿಗಳನ್ನು ಬಂಽಸಿದ್ದಾರೆ. ದಾಳಿ ವೇಳೆ ೨.೯೦ ಲಕ್ಷ ರೂ.ಮೌಲ್ಯದ ೧೪.೪೯ ಗ್ರಾಂ ಹೆರಾಯಿನ್ ಪುಡಿಯ ೧೨೪ ಪ್ಯಾಕೇಟ್ ಪತ್ತೆಯಾಗಿವೆ.ಆರೋಪಿ ಮಹಾರಾಷ್ಟçದ ಮಹಿಳೆಯ ಪತ್ತೆಗಾಗಿ ತನಿಖೆ ನಡೆದಿದೆ ಎಂದು ಪ್ರಕರಣ ದಾಖಲಿಸಿಕೊಂಡ ಮಾಳಮಾರುತಿ ಠಾಣೆ ಪೊಲೀಸ್‌ರು ತಿಳಿಸಿದ್ದಾರೆ.

ಪೋಟೊ:೧೮ಆನಂದ೨
ಬ