ತಣ್ಣಗಾಗದ ಕಬ್ಬಿನ ಕಿಚ್ಚು
| ಹೆದ್ದಾರಿ ಪ್ರತಿಭಟನೆ ಮುಕ್ತಾಯ | ಹುಬ್ಬಳಿಯತ್ತ ಪಾದಯಾತ್ರೆ ಆರಂಭ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ಪ್ರತಿ ಟನ್ ಕಬ್ಬಿಗೆ ೫,೫೦೦ ಎಫ್ಆರ್ಪಿ ನಿಗದಿ ಪಡಿಸುವಂತೆ ಮತ್ತು ಸಕ್ಕರೆ ಎಂಎಸ್ಪಿ ೬೦ ರೂ. ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪೂನಾ-ಬೆಂಗಳೂರ ರಾಷ್ಟಿçÃಯ ಹೆದ್ದಾರಿ ೪೮ರ ಹತ್ತರಗಿ,ಹಿರೇಬಾಗೇವಾಡಿ ಮತ್ತು ಕೋಗನೊಳ್ಳಿ ಟೋಲ್ ನಾಕಾ ಬಳಿ ಹೆದ್ದಾರಿ ತಡೆದು ನಡೆಸುತ್ತಿದ್ದ ಪ್ರತಿಭಟನೆ ಕೈಬಿಟ್ಟು, ಹುಬ್ಬಳಿಯತ್ತ ಪಾದಯಾತ್ರೆ ಆರಂಭಿಸಿದ್ದಾರೆ.
ಬೆಲೆ ನಿಗದಿ ಸೇರಿ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಮಂಗಳವಾರ ಬೆಳಗ್ಗೆ ಆರಂಭವಾದ ಪ್ರತಿಭಟನೆ ಅಹೋರಾತ್ರಿ ಮುಂದುವರೆಯಿತು. ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಸೇರಿ ರೈತ ಮುಖಂಡರು ಹೆದ್ದಾರಿಯಲ್ಲಿಯೇ ಊಟ ಮಾಡಿ, ಅಲ್ಲಿಯೇ ಮಲಗಿಕೊಂಡಿದ್ದರು.
ಸಾಯಂಕಾಲದವರೆಗೂ ಹೆದ್ದಾರಿ ಸ್ತಭ್ದ:
ಕಬ್ಬು ಬೆಳೆಗಾರರ ಹೋರಾಟದ ಕಿಚ್ಚಿಗೆ ಪೂನಾ-ಬೆಂಗಳೂರ ರಾಷ್ಟಿçÃಯ ಹೆದ್ದಾರಿ ಬುಧವಾರ ಸಂಜೆವರೆಗೂ ಸಂಪೂರ್ಣ ಸ್ಪಭ್ತವಾಗಿತ್ತು. ರೈತರು ಟೋಲ್ ಪ್ರವೇಶಕ್ಕೆ ಟ್ರಾಕ್ಟರ್ ಟ್ರೇಲರ್ ಅಡ್ಡಗಟ್ಟಿ ಸಂಪೂರ್ಣವಾಗಿ ರಸ್ತೆ ತಡೆ ನಡೆಸಿದರ ಪರಿಣಾಮವಾಗಿ ಹೆದ್ದಾರಿಯಲ್ಲಿ ವಾಹನಗಳು ಇಲ್ಲದೆ ಸ್ತಭ್ದಗೊಂಡಿತ್ತು.
ಲಾರಿ ಚಾಲಕರ ಪರದಾಟ:
ರೈತರು ಕೈಗೊಂಡಿದ್ದ ಪ್ರತಿಭಟನೆ ಬಿಸಿ ಲಾರಿ ಚಾಲಕರಿಗೆ ತಟ್ಟಿತು,್ತ ರೈತ ಸಂಘ ಏಕಾಏಕಿ ಹೆದ್ದಾರಿ ಬಂದ್ ಕರೆ ನೀಡಿದ್ದರ ಪರಿಣಾಮ ಸತತ ಎರಡು ದಿನ ರಸ್ತೆ ಮಧ್ಯದಲ್ಲಿಯೇ ವಾಹನಗಳು ನಿಂತುಕೊAಡಿದ್ದರಿAದ ವಾಹನ ಚಾಲಕರು, ಕ್ಲಿನರ್ಗಳು ಆಹಾರ ಮತ್ತು ನೀರಿಗಾಗಿ ಪರದಾಡಿದ್ದಾರೆ. ಹತ್ತರಗಿ ಟೋಲ್ ನಾಕಾದಿಂದ ಸಂಕೇಶ್ವರ ವರೆಗೆ ಸುಮಾರು ೧೫ ಕಿಮೀ ಹಾಗೂ ಕಮತನೂರ ಗೇಟ್ದಿಂದ ನಿಡಸೋಸಿ ವರೆಗೆ ಗೋಟೂರ-ವಿಜಯಪುರ ಹೆದ್ದಾರಿಯಲ್ಲಿ ವಾಹನಗಳು ರಸ್ತೆ ಬದಿಯಲ್ಲಿ ನಿಂತುಕೊAಡಿದ್ದವು.
ರೈತ ಮುಖಂಡ ಚೂನಪ್ಪ ಪೂಜಾರಿ ಮಾತನಾಡಿ, ಕೇಂದ್ರ ಸರ್ಕಾರ ಸಕ್ಕರೆ ಎಂಎಸ್ಪಿ ೬೦ ರೂ.ಗೆ ಹೆಚ್ಚಿಸಬೇಕು. ಪ್ರತಿ ಟನ್ ಕಬ್ಬಿಗೆ ೫,೫೦೦ ನಿಗದಿ ಮಾಡಲೆಬೇಕು. ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರಿಗೆ ರೈತರ ಕಷ್ಟ ಗೊತ್ತಿಲ್ಲ, ಕೇಂದ್ರ ಸರ್ಕಾರ ರೈತರಿಗೆ ನಿರಂತರ ಅನ್ಯಾಯ ಮಾಡುತ್ತಿದೆ.ಎಂಎಸ್ಪಿ ೬೦ ರೂ.ನಿಗದಿ ಮಾಡುವವರೆಗೂ ಹೋರಾಟ ಮುಂದುವರೆಯಲಿದೆ. ಕೇಂದ್ರ ಸರ್ಕಾರ ನಮ್ಮ ಮೇಲೆ ಗುಂಡು ಹಾಕಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾದಯಾತ್ರೆಗೆ ಕರೆ:
ಎರಡು ದಿನ ನಡೆದ ಪ್ರತಿಭಟನೆ ಬಳಿಕ ಕೇಂದ್ರ ಸರ್ಕಾರದಿಂದ ರೈತರ ಬೇಡಿಕೆಗೆ ಸ್ಪಂದನೆ ಸಿಗದಿರುವ ಹಿನ್ನೆಲೆಯಲ್ಲಿ ರೈತ ಮುಖಂಡರು ಹತ್ತರಗಿ ಟೋಲ್ ನಾಕಾದಿಂದ ಪಾದಯಾತ್ರೆ ಮೂಲಕ ಕೇಂದ್ರ ಸಚಿವ ಪ್ರಲ್ದಾದ ಜೋಷಿ ಮನೆಗೆ ಮುತ್ತಿಗೆ ಹಾಕಲು ಕರೆ ನೀಡಿದರು. ಹತ್ತರಗಿ,ಯಮÀಕನಮರಡಿ,ನರಸಿಂಗಪುರ,ವAಟಮೂರಿ ಮಾರ್ಗವಾಗಿ ಬೆಳಗಾವಿ ಸಮೀಪದ ಮುಕ್ತ ಮಠದಲ್ಲಿ ರೈತರು ವಾಸ್ತವ್ಯ ಹೂಡಲಿದ್ದಾರೆ.ಗುರುವಾರ ಬೆಳಗ್ಗೆ ಪಾದಯಾತ್ರೆ ಹುಬ್ಬಳಿಯತ್ತ ಸಾಗಲಿದೆ.
ರೈತ ಸಂಘದ ಗೌರವ ಅಧ್ಯಕ್ಷ ಶಶಿಕಾಂತ ಗೂರೂಜಿ, ಹತ್ತರಗಿ ಕಾರಿಮಠದ ಗುರುಸಿದ್ಧ ಸ್ವಾಮೀಜಿ ಸೇರಿದಂತೆ ಸಾವಿರಾರೂ ರೈತರ ಇದ್ದರು.
ಭಾಕ್ಸ
ಮಹಾದಲ್ಲಿ ಕಬ್ಬು ಕಿಚ್ಚು
ಕೋಗನೊಳ್ಳಿ ಟೋಲ್ ನಾಕಾ ಬಳಿ ಪ್ರತಿಭಟನೆ ನಡೆಸಿದ ಮಹಾರಾಷ್ಟçದ ಸಾಭಿಮಾನಿ ಶೇತಕರಿ ಸಂಘಟನೆ ಮುಖಂಡರು ಪ್ರತಿಭಟನೆ ಕೈಬಿಟ್ಟಿದ್ದು, ಕಬ್ಬಿಗೆ ೫೫೦೦ ಬೆಲೆ ನಿಗದಿ ಮಾಡದೆ, ಆರಂಭಿಸಿರುವ ಕೊಲ್ಲಾಪುರ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಗುರುವಾರ ಮುತ್ತಿಗೆ ಹಾಕಲು ಮುಖಂಡ ರಾಜು ಶೆಟ್ಟಿ ಕರೆ ನೀಡಿದ್ದಾರೆ.
-----------