ಬೆಳಗಾವಿ ತಾಲೂಕಿನ ಬೆನಕನಹೊಳಿ ಸ್ವಾಮಿ ಛಾಯಾ ಪ್ರತಿಷ್ಠಾನದ ಘರಕುಲ ವೃದ್ಧಾಶ್ರಮದ ರಜತ ಮಹೋತ್ಸವ ಕಾರ್ಯಕ್ರಮವನ್ನು ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು.ರಾಜೀವ್ ಪೋತದಾರ, ಅನಿಲ ಪೋತದಾರ,ಸಚಿನ್ ಸಬ್ನಿಸ್ ಇತರರಿದ್ದರು.  
ಬೆಳಗಾವಿ

ಹಿರಿಯರನ್ನು ಗೌರವಿಸುವುದು ನಮ್ಮ ಕರ್ತವ್ಯ

ಚನ್ನರಾಜ ಹಟ್ಟಿಹೊಳಿ ಅಭಿಪ್ರಾಯ



 ಹಿರಿಯರನ್ನು ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿ
| ವಿ.ಪ ಸದಸ್ಯ ಚನ್ನರಾಜ ಹಟ್ಟಿಹೊಳಿ | ಘರಕುಲ ವೃದ್ಧಾಶ್ರಮದ ರಜತ ಮಹೋತ್ಸವ ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ತಮ್ಮ ಬದುಕಿನ ಬಹುಪಾಲು ಸಮಯವನ್ನು ಮಕ್ಕಳ ಭವಿಷ್ಯಕ್ಕಾಗಿ ಮೀಸಲಿಡುವ ಹಿರಿಯರಿಗೆ ಜೀವನದ ಸಂಧ್ಯಾಕಾಲದಲ್ಲಿ ಪ್ರೀತಿ, ನೆಮ್ಮದಿ ಮತ್ತು ಗೌರವ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಆದರೆ ಇಂದಿನ ತಾಂತ್ರಿಕ ಯುಗದಲ್ಲಿ ಮಾನವೀಯ ಸಂಬAಧಗಳು ಕಳಚಿಹೋಗುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಕಳವಳ ವ್ಯಕ್ತ ಪಡಿಸಿದರು.
ತಾಲೂಕಿನ ಬೆನಕನಹಳ್ಳಿಯ ಸ್ವಾಮಿ ಛಾಯಾ ಪ್ರತಿಷ್ಠಾನದ ಘರಕುಲ ವೃದ್ಧಾಶ್ರಮದ ರಜತ ಮಹೋತ್ಸವ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.  
ಸಮಾಜದ ನಿಜವಾದ ಶ್ರೀಮಂತಿಕೆ ಅಳೆಯಬೇಕಾದದ್ದು, ಅದು ತನ್ನ ಹಿರಿಯರನ್ನು ಎಷ್ಟು ಗೌರವದಿಂದ ನೋಡಿಕೊಳ್ಳುತ್ತದೆ ಎಂಬುದರ ಆಧಾರದ ಮೇಲೆ. ಹಿರಿಯರು ನಮ್ಮ ಕುಟುಂಬದ ಆಸ್ತಿ ಮಾತ್ರವಲ್ಲ, ನಮ್ಮ ಸಮಾಜದ ಅನುಭವದ ಸಂಪತ್ತು. ಅವರು ಬದುಕಿನಲ್ಲಿ ಕಂಡ ಏಳುಬೀಳುಗಳು, ಎದುರಿಸಿದ ಸವಾಲುಗಳು, ಕಲಿಸಿದ ಮೌಲ್ಯಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ಅವರು ಹೇಳಿದರು.
ಘರಕುಲ ವೃದ್ದಾಶ್ರಮಕ್ಕೆ ಪ್ರತಿ ವರ್ಷ ನಮ್ಮಿಂದಾದ ಸೇವೆ ಸಲ್ಲಿಸುತ್ತೇವೆ. ಇದು ಸಹಾಯ ಎಂದು ಭಾವಿಸದೆ, ನಮ್ಮ ಕರ್ತವ್ಯ ಎಂದು ಭಾವಿಸುತ್ತೇನೆ. ನಮಗೆ ಕೊಟ್ಟಿರುವ ಜವಾಬ್ದಾರಿನ್ನು ನಿರ್ವಹಿಸುತ್ತೇವೆ. ೨೦೦೧ರಲ್ಲಿ ತಿಲಕವಾಡಿಯ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಕೇವಲ ಮೂವರು ಹಿರಿಯರೊಂದಿಗೆ ಆರಂಭವಾದ ಘರಕುಲದ ಸೇವೆ, ಇಂದು ಬೆನಕನಹಳ್ಳಿಯ ವಿಶಾಲ ಪರಿಸರದಲ್ಲಿ ಅನೇಕ ಹಿರಿಯರಿಗೆ ಆಸರೆಯಾಗಿರುವುದು ದೊಡ್ಡ ಸಾಧನೆ ಎಂದು ಹೇಳಿದರು.
 ಉದ್ಯಮಿ ಸಚಿನ್ ಸಬ್ನಿಸ್ ಮಾತನಾಡಿ ೨೫ ವರ್ಷಗಳ ಘರಕುಲದ ಸೇವೆ ಸಣ್ಣ ಕೆಲಸವಲ್ಲ. ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾದದ್ದು. ಅವರು ಜ್ಞಾನದ ಭಂಡಾರ ಇದ್ದಂತೆ. ಅವರ ಅನುಭವಗಳೇ ನಮಗೆ ಜೀವನದ ದಾರಿದೀಪ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಅನಿಲ ಪೋತದಾರ, ಘರಕುಲ ಆರಂಭವಾದ ಸಂದರ್ಭ, ಅದರ ಹಿಂದಿನ ತ್ಯಾಗ ಮತ್ತು ಕಳೆದ ೨೫ ವರ್ಷದಲ್ಲಿ ನಡೆದುಬಂದ ದಾರಿಯನ್ನು ವಿವರಿಸಿದರು.
 ಸ್ವಾಮಿ ಛಾಯಾ ಪ್ರತಿಷ್ಠಾನದ ಅಧ್ಯಕ್ಷ ರಾಜೀವ್ ಪೋತದಾರ, ಶೈಲಾ ಚಾಟೆ, ಚಿಂತಾಮಣಿ ಗ್ರಾಮೋಪಾಧ್ಯೆ, ಲಕ್ಷಿ÷್ಮÃ ಪೋತದಾರ,ಕಾರ್ಯದರ್ಶಿ ಎನ್.ಬಿ. ದೇಶಪಾಂಡೆ ಇತರರದ್ದರು.
ಪ