ಸುದ್ದಿಗೋಷ್ಠಿಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿದರು. 
ಬೆಳಗಾವಿ

ಹಾಲಸಿದ್ಧನಾಥ ಕಾರ್ಖಾನೆಯಿಂದ ಕಬ್ಬಿನ ದರ ಹೆಚ್ಚಳ

ಪ್ರತಿ ಟನ್ ಕಬ್ಬಿಗೆ 4300 ರೂ.ಘೋಷಣೆ

ಹಾಲಸಿದ್ಧನಾಥ ಕಾರ್ಖಾನೆಯಿಂದ ಕಬ್ಬಿನ ದರ ಮತಷ್ಟು ಹೆಚ್ಚಳ

| ಪ್ರತಿ ಟನ್‌ಗೆ ೪೩೦೦ ರೂ.ಘೋಷಣೆ | ರೈತರಲ್ಲಿ ಸಂತಸ

ವಿಜಯವಾಣಿ ಸುದ್ದಿಜಾಲ ನಿಪ್ಪಾಣಿ

ಇಲ್ಲಿನ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಈ ಹಿಂದೆ ಘೋಷಿಸಲಾಗಿದ್ದ ಪ್ರತಿ ಮೆಟ್ರಿಕ್ ಟನ್‌ಗೆ ೩,೭೭೦ ರೂ. ಮೊದಲ ಕಂತಿನ ದರದಲ್ಲಿ  ೩೦ ರೂ.ಹೆಚ್ಚಳವನ್ನು ಮಾಡಲಾಗಿದೆ ಎಂದು ಕಾರ್ಖಾನೆ ಮಾರ್ಗದರ್ಶಕ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದ್ದಾರೆ.

ಕಾರ್ಖಾನೆಯ ಸಭಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಗಾರರಿಗೆ ಮೊದಲ ಕಂತಿನ ಪರಿಷ್ಕೃತ ದರ ಪ್ರತಿ ಮೆಟ್ರಿಕ್ ಟನ್‌ಗೆ ೩,೮೦೦ ರೂ. ಹಂಗಾಮಿನಲ್ಲಿ ಸಕ್ಕರೆ ಮಾರಾಟದ ಸರಾಸರಿ ಬೆಲೆ ರೂ. ೫೫ ಇದ್ದಲ್ಲಿ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ  ೪೩೦೦ ರೂ. ದರ ಆಗಿರಲಿದೆ ಎಂದು ಹೇಳಿದರು.

ಕಬ್ಬು ಬೆಳೆಗಾರರ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯಬೇಕು, ಅವರ ಆರ್ಥಿಕ ಉನ್ನತಿಗೆ ನೆರವಾಗಬೇಕು ಹಾಗೂ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮೇಲಿನ ರೈತರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಬೇಕು ಎಂಬ ಉದ್ಧೇಶದಿಂದ ಮೊದಲ ಕಂತಿನ ದರದಲ್ಲಿ ಹೆಚ್ಚಳ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಈ ಮೊದಲು ಘೋಷಿಸಿದಂತೆ, ಪ್ರಸಕ್ತ ಹಂಗಾಮಿನ ಅಂತಿಮ ಸರಾಸರಿ ಸಕ್ಕರೆ ಇಳುವರಿ ಶೇ.೧೧.೫೦ ಅಥವಾ ಅದಕ್ಕಿಂತ ಹೆಚ್ಚಾದಲ್ಲಿ ಪ್ರತಿ ಟನ್‌ಗೆ ಹೆಚ್ಚುವರಿಯಾಗಿ ೧೦೦ ರೂ. ಹಂಗಾಮಿನ ಮುಕ್ತಾಯದ ನಂತರ ಪಾವತಿಸಲಾಗುವುದು.ಹಂಗಾಮಿನಲ್ಲಿ ಉತ್ಪಾದನೆಯಾಗುವ ಸಕ್ಕರೆಯ ಸರಾಸರಿ ಮಾರಾಟ ದರ ಪ್ರತಿ ಕೆಜಿಗೆ ೫೦ ರೂ. ಇದ್ದಲ್ಲಿ ಪ್ರತಿ ಟನ್‌ಗೆ ೨೦೦ ರೂ. ರೂ. ಹಾಗೂ ೫೫ ಇದ್ದಲ್ಲಿ ೪೦೦ ರೂ ಮತ್ತು  ಸಕ್ಕರೆ ದರ ೬೦ ರೂ. ಇದ್ದಲ್ಲಿ  ೬೦೦ ರೂ.ಹೆಚ್ಚುವರಿ ಮೊತ್ತವನ್ನು ಮುಂದಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗುವ ಮೊದಲು ಪಾವತಿಸಲಾಗುವುದು ಎಂದರು.

ಕಾರ್ಖಾನೆ ಆಡಳಿತ ಮಂಡಳಿಯ ರೈತಪರ ನಿರ್ಧಾರದ ಹಿನ್ನೆಲೆಯಲ್ಲಿ  ಪ್ರಸ್ತಕ ಹಂಗಾಮಿನಲ್ಲಿ ಎಲ್ಲ ಕಬ್ಬು ಬೆಳೆಗಾರರು ತಮ್ಮ ಹೊಲಗಳಲ್ಲಿ ಬೆಳೆದಿರುವ ಕಬ್ಬನ್ನು  ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಗೆ ನುರಿಸಲು ಕಳುಹಿಸುವ ಮೂಲಕ ಸಹಕರಿಸಬೇಕು ಎಂದು ಆಡಳಿತ ಮಂಡಳಿಯ ವತಿಯಿಂದ ಮನವಿ ಮಾಡಿದರು.

ಕಾರ್ಖಾನೆಯ ಅಧ್ಯಕ್ಷ ಜಯಕುಮಾರ ಖೋತ, ನಿರ್ದೇಶಕ ಮಲಗೌಡ ಪಾಟೀಲ, ಅವಿನಾಶ ಪಾಟೀಲ, ಪವನಕುಮಾರ ಪಾಟೀಲ, ಪ್ರಕಾಶ ಶಿಂಧೆ, ರಮೇಶ ಪಾಟೀಲ, ಜಯವಂತ ಭಾಟಲೆ, ರಾಜು ಗುಂದೇಶಾ, ಶ್ರಿಕಾಂತ ಬನ್ನೆ, ವಿನಾಯಕ ಪಾಟೀಲ, ಸುಹಾಸ ಗುಗೆ, ರಾವಸಾಹೇಬ ಫರಾಳೆ, ಮಹಾಲಿಂಗ ಕೋಠಿವಾಲೆ, ರಾಜೇಂದ್ರ ಕಾನಡೆ, ಡಾ.ಸುದರ್ಶನ ಮುರಾಬಟ್ಟೆ, ರಣಜೀತ ಮಾನೆ, ಕಿರಣ ನಿಕಾಡೆ ಇದ್ದರು.