ಬೆಳಗಾವಿ ಚಳಿಗಾಲದ ಅಧಿವೇಶನ ಕೆಲಸಗಳನ್ನು ಸ್ಥಳೀಯರಿಗೆ ನೀಡುವಂತೆ ಮನವಿ. 
ಬೆಳಗಾವಿ

ಸ್ಥಳೀಯರಿಗೆ ಕೆಲಸ ನೀಡಿ

ವಿದ್ಯುತ್, ಪೆಂಡಾಲ್ ಸಂಘದಿಂದ ಮನವಿ

ಸ್ಥಳೀಯರಿಗೆ ಅವಕಾಶ ನೀಡಿ
| ಪೆಂಡಾಲ್, ವಿದ್ಯುತ್ ಕಾಮಗಾರಿ ಸಂಘದಿಂದ ಮನವಿ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಚಳಿಗಾಲ ಅಧಿವೇಶನದ ಅಳವಡಿಸಲಾಗುವ ಪೆಂಡಾಲ್ ಮತ್ತು ದ್ವೀಪಾಲಂಕಾರ ಕೆಲಸಕ್ಕೆ  ಸ್ಥಳೀಯ ಪೆಂಡಾಲ್ ಮತ್ತು ವಿದ್ಯುತ್ ದೀಪಾಲಂಕಾರ ಗುತ್ತಿಗೆದಾರರಿಗೆ ಮೊದಲ ಆದ್ಯತೆ ನೀಡಬೇಕು ಎಂದು ತಾಲೂಕು ಪೆಂಡಾಲ್ ಮತ್ತು ವಿದ್ಯುತ್ ಕಾಮಗಾರಿ ಸಂಘದಿಂದ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮುಂದಿನ ತಿಂಗಳು ನಡೆಯಲಿರುವ ಚಳಿಗಾಲ ಅಧಿವೇಶನ ಹಿನ್ನಲೆ ನಗರದಲ್ಲಿ ಅಳವಡಿಸಲಾಗುವ ಪೆಂಡಾಲ್,ಲೈಟಿಂಗ್, ಧ್ವನಿವರ್ಧಕ,ಕೇಟರಿಂಗ್ ಸರ್ವಿಸ್ ಸೇರಿ ಇತ್ಯಾದಿ ಕೆಲಸದ ಗುತ್ತಿಗೆಯನ್ನು ಹೊರ ಜಿಲ್ಲೆಯವರಿಗೆ ನೀಡಲಾಗುತ್ತಿದೆ. ಇದರಿಂದ ಸ್ಥಳೀಯವಾಗಿ ಕೆಲಸ ಮಾಡುವ ಕೂಲಿಕಾರ್ಮಿಕರಿಗೆ ನಷ್ಟವಾಗುತ್ತಿದೆ. ಆದ್ದರಿಂದ ಸ್ಥಳೀಯರಿಗೆ ಮೊದಲ ಆದ್ಯತೆ ನೀಡುವಂತೆ ಇಲಾಖೆಗಳಿಗೆ ಆದೇಶ ನೀಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.
ನಾರಾಯಣ ಚೌಗಲೆ, ಬಹು ಮನ್ನೋಳಕರ್, ವಿಜಯ ಕಾಕತಕರ್, ದಾಮೋದರ ರತನ,ಭರತೇಶ ಪಾಟೀಲ, ದುರ್ಗಾಪ್ರಸಾದ ಜ್ಯೋತಿ ಇತರರಿದ್ದರು.