ಸರ್ಕಾರಿ ಗೌರವದೊಂದಿಗೆ ಅರುಣ ಸಾಳುಂಕೆ ಅಂತ್ಯಕ್ರಿಯೆ
ವಿಜಯವಾಣಿ ಸುದ್ದಿಜಾಲ ಅರಟಾಳ ; ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಬೆಂಗಳೂರಿನ ಅಪರಾಧ ತನಿಖಾ ದಳದ [ಸಿಸಿಬಿ] ಪೋಲಿಸ್ ಇನ್ಸಪೆಕ್ಟರ್ ಅರುಣ ಸಾಳುಂಕೆ ಅವರ ಅಂತ್ಯಕ್ರಿಯ ಸೋಮವಾರ ಅವರ ಹುಟ್ಟೂರಾದ ಬೆಳಗಾವಿ ಜಿಲ್ಲೇ ಅಥಣಿ ತಾಲೂಕಿನ ಅರಟಾಳ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಅರಟಾಳ ಗ್ರಾಮದ ಹೆಮ್ಮೇಯ ಪುತ್ರ ಅರುಣ ಸಾಳುಂಕೆ ಅವರ ಅಕಾಲಿಕ ನಿಧನ, ಎರಡು ದಿನಗಳಿಂದ ಇಡಿಗ್ರಾಮವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ. ಅರುಣ ಸಾಳುಂಕೆಯವರ ಪಾರ್ಥಿವ ಶರೀರ ಹುಟ್ಟುರಿಗೆ ಆಗಮಿಸುತ್ತಿದಂತೆ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಗ್ರಾಮಸ್ಥರ ದುಖದ ಕಟ್ಟೆಯೊಡೆಯಿತ್ತು. ಎಲ್ಲರ ಕಣ್ಣಲ್ಲಿ ನೀರು. ತಮ್ಮೂರಿನ ಹೆಮ್ಮೆಯ ಮಗನ ಅಂತಿಮ ದರ್ಶನ ಪಡೆಯಲು ಸುತ್ತಮುತ್ತಲಿನ ಗ್ರಾಮಗಳಿಂದಲು ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದರು. ಅಂತಿಮ ದರ್ಶನಕ್ಕಾಗಿ ಜನಸಾಗರವೇ ಹರಿದು ಬಂದಿದ್ದು.
ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕಣ್ಣೀರಿಡುತ್ತಾ ತಮ್ಮ ನೆಚ್ಚಿನ ಮಗನಿಗೆ ಅಂತಿಮ ನಮನ ಸಲ್ಲಿಸಿದರು. ತಮ್ಮೊಂದಿಗೆ ಬೆರೆತು, ಬಾಲ್ಯದಿಂದಲೇ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಅರುಣ ಅವರನ್ನು ಕಳೆದುಕೊಂಡ ನೋವು ಗ್ರಾಮಸ್ಥರ ಮುಖದಲ್ಲಿ ಎದುಕಾಣುತ್ತಿತ್ತು.
ಸವಾಲುಗಳನ್ನು ಮೆಟ್ಟನಿಂತು ಪೋಲಿಸ್ ಇಲಾಖೆಯಲ್ಲಿ ತಮ್ಮದೇ ಆದ ಗುರುತು ಮೂಡಿಸಿಕೊಂಡು ನೂರಾರು ಗೆಳೆಯರ ಮನಸ್ಸನ್ನು ಗೆದ್ದ ಅರುಣ ಇನ್ನಿಲ್ಲದೇ ಇರುವುದನ್ನು ಅರಗಿಸಿಕೊಳ್ಳಲು ಅವರ ಗೆಳೆಯರ ಬಳಗಕ್ಕೆ ಆಗದೇ ಕಣ್ಣಿರು ಹಾಕುತ್ತಾ ಗೆಳಯನ ಅಂತಿಮ ದರ್ಶನ ಪಡೆದರು.
ಅರುಣ ಅವರು ತಂದೆ ಮನೋಹರ ಸಾಳುಂಕೆ, ತಾಯಿ ಸಂಜೀವಿನಿ ನೆಚ್ಚಿನ ಮಗನ್ನು ಕಳೆದುಕೊಂಡು ದುಖದ ಮಡುವಿನಲ್ಲಿ ಮುಳುಗಿದರು. ಅರುಣ ಅವರ ಪತ್ನಿ ಅರ್ಚನಾ, ಮಗ ವಲ್ಲಬ, ಮಗಳು ಲಾವಣ್ಯ ಕಣ್ಣಿರು ಹಾಕುವ ದೃಶವನ್ನು ನೋಡಿದ ಜನರು ದುಖದಿಂದ ಕಣ್ಣಿರು ಹಾಕುತ್ತಾ ದೇವರು ಇಂತಹ ಸಂದರ್ಭವನ್ನು ಅರುಣನಿಗೆ ತರಬಾರದಿತ್ತು ಎಂದು ಕಣ್ಣಿರು ಹಾಕಿದರು. ಇನ್ನು ಅರುಣನ ಅಕ್ಕ ಮತ್ತು ತಮ್ಮ ಕಣ್ಣಿರು ಹಾಕುತ್ತಾ ಅಂತಿಮ ದರ್ಶನ ಪಡೆದರು.
ಅರುಣ ಅವರ ಅಂತಿಮ ದರ್ಶನಕ್ಕೆ ಬೆಂಗಳೂರು, ವಿಜಯಪೂರ, ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ, ದೆಹಲಿ, ಕೊಲ್ಹಾಪೂರ, ಸಾಂಗಲಿ ವಿವಿದ ನಗರಗಳಿಂದ ಪೋಲಿಸ್ ಅಧಿಕಾರಿಗಳು ಹಾಗೂ ಅಥಣಿ ತಾಲೂಕಾ ದಂಡಾಧಿಕಾರಿಗಳು ಹಾಗೂ ಗೆಳೆಯರು ಬಂದು ಅರುಣ ಅವರ ಅಂತಿಮ ದರ್ಶನ ಪಡೆದುಕೊಂಡರು. ಅರುಣ ಅವರ ಅಂತಿಮ ದರ್ಶನಕ್ಕೆ ಪೋಲಿಸ್ ಇಲಾಖೆಯವರು ತೊಂದರೆಯಗದಂತೆ ಬ್ಯಾರಿಕೇಡ, ಬಿಸಿಲು ಬಾರದಂತೆ ಪೇಡಂಲ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ವಾಹಣ ನಿಲ್ಲುಗಡೆ ಮಾಡಿದರು.