ವಿದ್ಯುತ್ ಶಾರ್ಟ್ನಿಂದ ೧೦ ಎಕರೆ ಕಬ್ಬು ಹಾನಿ
ವಿಜಯವಾಣಿ ಸುದ್ದಿಜಾಲ ಸಂಕೇಶ್ವರ
ವಿದ್ಯುತ್ ಶಾರ್ಟ್ ಸರ್ಕ್ಯೂಟಿನಿಂದ ಬೆಂಕಿ ತಗುಲಿ ಸುಮಾರು ೧೦ ಎಕರೆ ಕಬ್ಬು ಬೆಂಕಿಗೆ ಸುಟ್ಟು ಕರಕಲಾದ ಘಟನೆ ಸಮೀಪದ ನಿಡಸೋಸಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ನಿಡಸೋಸಿ ಗ್ರಾಮದ ರೈತ ಸಂತೋಷ ಮಲಗೌಡ ಪಾಟೀಲ ಹಾಗೂ ಇತರರಿಗೆ ಸೇರಿದ ಸುಮಾರು ೧೦ ಎಕರೆ ಕಬ್ಬು ಬೆಂಕಿಗೆಗಾಹುತಿಯಾಗಿದೆ. ಟ್ರಾನ್ಸಪಾರ್ಮರ ಬಳಿ ಕಾಣಿಸಿಕೊಂಡ ಬೆಂಕಿಯ ಕಿಡಿ ತಗುಲಿ ನೋಡ ನೋಡುತ್ತಲೇ ೧೦ ಎಕರೆ ಕಬ್ಬಿಗೆ ಬೆಂಕಿ ತಗುಲಿತು.ವಿಷಯ ತಿಳಿದ ಟ್ರಾಕ್ಟರ್ ಚಾಲಕ ರಾಕೇಶ ಧನೋಡಿ ಸ್ಥಳೀಯ ರೈತರ ನೆರವಿನೊಂದಿಗೆ ಟ್ಯಾಂಕರ ಮೂಲಕ ಉರಿಯುವ ಝಳದಲ್ಲಿ ಟ್ರಾಕ್ಟರ್ ನುಗ್ಗಿಸಿ ಸುತ್ತಲಿನ ನೂರಾರು ಎಕರೆ ಪ್ರದೇಶಕ್ಕೆ ವ್ಯಾಪಿಸಬಹುದಾಗಿದ್ದ ಅನಾಹುತ ತಪ್ಪಿಸಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಂಕೇಶ್ವರ ಅಗ್ನಿಶಾಮಕ ದಳದ ವಾಹನ ಜಮೀನನಲ್ಲಿಯೇ ಸಿಕ್ಕಿಹಾಕಿಕೊಂಡಿತು.ಬೆಲ್ಲದ ಬಾಗೇವಾಡಿ ವಿಶ್ವರಾಜ ಶುಗರ್ಸನ ಅಗ್ನಿಶಾಮಕ ತಂಡ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದರು.
ಬರಗಾಲದ ನಡುವೆಯೂ ಬೆಳೆದ ಕಬ್ಬು ಬೆಳೆ ಬೆಂಕಿಯಲ್ಲಿ ಬೆಂದಿರುವುದು ತೀವ್ರ ನಷ್ಟವಾಗಿದೆ.ಸುಟ್ಟ ಕಬ್ಬನ್ನು ಕೊಂಡೊಯ್ಯಲು ಸÀರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕು.ಕೂಡಲೇ ನಮಗೆ ಪರಿಹಾರರ ಕಲ್ಪಿಸಬೇಕು ಎಂದು ಸಂತ್ರಸ್ತ ರೈತರು ಒತ್ತಾಯಿಸಿದ್ದಾರೆ.
ಉಪತಹಶೀಲ್ದಾರ ಸಿ.ಎ. ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಹಾನಿ ಕುರಿತು ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸುವದಾಗಿ ತಿಳಿಸಿದರು.
ಸ್ಥಳಕ್ಕೆ ವಿಶ್ವರಾಜ ಶುಗರ್ಸನ ಅಧಿಕಾರಿ ಬಾಳೇಶ ವರ್ಜಿ, ಗ್ರಾಪಂ ಮಾಜಿ ಅಧ್ಯಕ್ಷ ಪಾಟೀಲ, ಸಂಗಮ ಶುಗರ ನಿರ್ದೇಶಕ ಸುಭಾಷ ಪಾಟೀಲ, ಶಾಂತೇಶ ಪಾಟೀಲ,ಮಹಾಲಿಂಗನಗೌಡ ನಿಂಗನೂರಿ, ರಾಜು ಯರಗಟ್ಟಿ, ಸಾತಪ್ಪಾ ಕಾರತಗಿ, ಉಮೇಶ ಪಾಟೀಲ, ಮಲ್ಲಪ್ಪ ತನೋಡಿ, ರಾಜು ಮದಿಹಳ್ಳಿ ಇತರರಿದ್ದರು.