ಚಿಕ್ಕೋಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಾ.ಗುಡಸಿ ಮಾತನಾಡಿದರು. 
ಬೆಳಗಾವಿ

ಲೇಖಕ ರವಿಹಂಜಿಮಠ ವಿರಿದ್ಧ ಕ್ರಮಕ್ಕೆ ಒತ್ತಾಯ

ಬಸವಣ್ಣನವರಿಗೆ ಅವಹೇಳನೆಗೆ ಖಂಡನೆ

ಲೇಖಕ ರವಿ ಹಂಜಿಮಠ ವಿರುದ್ಧ ಕ್ರಮ ಕೈಗೊಳ್ಳಿ

| ಡಾ.ಚಂದ್ರಶೇಖರ ಗುಡಸಿ ಒತ್ತಾಯ

ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:

ವಿಶ್ವಗುರು ಬಸವಣ್ಣನವರ ವಚನಗಳನ್ನು ಅವಮಾನಿಸಿರುವ ಲೇಖಕ  ರವಿ ಹಂಜ ವಿರುದ್ಧ  ಕ್ರಿಮಿನಲï ಪ್ರಕರಣ ದಾಖಲಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಧ್ಯಕ್ಷ ಡಾ.ಚಂದ್ರಶೇಖರ ಗುಡಸಿ ಒತ್ತಾಯಿಸಿದ್ದಾರೆ.

ಪಟ್ಟಣದ  ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಮಾತನಾಡಿದ ಅವರು ದಾವಣಗೆರೆಯ ರವಿ ಹಂಜಿ ಅವರು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಬಸವಣ್ಣನವರನ್ನು  ಕೀಳಾದ ಪದಗಳಿಂದ ನಿಂದಿಸಿ, ಶರಣರ ವಚನಗಳನ್ನು ತಿರುಚಿ ಅವಹೇಳನ ಮಾಡಿದ್ದಾರೆ. ಈ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ಸಮಾಜದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಾ ಸಾರ್ವಜನಿಕ ಸೌಹಾರ್ದ ಕದಡುತ್ತಿದ್ದಾರೆ. ಇದನ್ನು ಪ್ರಸಾರ ಮಾಡುದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗುವದು ಎಂದು ತಿಳಿಸಿದರು.

ಜಾಗತೀಕ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಬಸವರಾಜ ಮಂಟೂರೆ, ಎಂ.ಎಸ್ ಮನಗೂಳಿ, ಪುಂಡಲಿಕ ಚೌಗಲಾ ಇತರರಿದ್ದರು.

ಪ

ಚ