ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಬ್ಬು ಮಹಾರಾಷ್ಟ್ರ ಕಾರ್ಖಾನೆಗೆ ಸಾಗಾಣಿಕೆಯಾಗುತ್ತಿರುವುದು. 
ಬೆಳಗಾವಿ

ಮಹಾರಾಷ್ಟ್ರದತ್ತ ಕಬ್ಬು ಬೆಳೆಗಾರರ ಚಿತ್ತ

ಮಹಾರಾಷ್ಟ್ರದಲ್ಲಿ ಪ್ರತಿ ಟನ್ ಗೆ 4660 ರೂ.ರಾಜ್ಯದಲ್ಲಿ ಕೇವಲ 3600 ರೂ.

ಮಹಾರಾಷ್ಟ್ರದತ್ತ ಕಬ್ಬು ಬೆಳೆಗಾರರ ಚಿತ್ತ!
| ಪ್ರತಿ ಟನ್ ಕಬ್ಬಿಗೆ ಮಹಾರಾಷ್ಟ್ರದಲ್ಲಿ ೪,೨೦೦ ರೂ.
| ರಾಜ್ಯದಲ್ಲಿ ಕೇವಲ ೩,೬೦೦ ರೂ.
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ಮಹಾರಾಷ್ಟçದ ಕೊಲ್ಲಾಪುರ ಜಿಲ್ಲೆಯಲ್ಲಿ ಪ್ರತಿ ಟನ್ ಕಬ್ಬಿಗೆ ೪,೨೦೦ ರೂ. ನೀಡಲು ಸಕ್ಕರೆ ಕಾರ್ಖಾನೆಗಳು ಮುಂದಾಗಿದ್ದು, ರಾಜ್ಯ ಗಡಿಭಾಗದ ರೈತರು ಅಲ್ಲಿನ ಕಾರ್ಖಾನೆಗಳಿಗೆ ಕಬ್ಬು ಕಳುಹಿಸಲು ಸಜ್ಜಾಗಿದ್ದಾರೆ.
ಕೊಲ್ಲಾಪುರದ ಹುಪರಿ, ಹಮಿದವಾಡ, ಶಿರೋಳ, ಕಾಪಸಿ, ಗುರುದತ್ತ, ಬಿದರಿ, ಪಂಚ ಗಂಗಾ ಸೇರಿದಂತೆ ಒಟ್ಟು ೧೧ ಸಕ್ಕರೆ ಕಾರ್ಖಾನೆಗಳು ಗಡಿಭಾಗದಿಂದ ಕೇವಲ ೧೫-೨೦ ಕಿಮೀ ದೂರದಲ್ಲಿದ್ದು, ಬೆಳಗಾವಿ ಜಿಲ್ಲೆಯ ಹುಕ್ಕೇರಿ, ಚಿಕ್ಕೋಡಿ, ರಾಯಬಾಗ, ಅಥಣಿ, ಕಾಗವಾಡ ಭಾಗದ ಶೇ.೫೦ರಷ್ಟು ಕಬ್ಬು ಮಹಾರಾಷ್ಟ್ರ ಕಾರ್ಖಾನೆಗಳ ಪಾಲಾಗುವ ಸಾಧ್ಯತೆ ಇದೆ.
ಕಬ್ಬು ಬೆಳೆಗಾರರು ನ್ಯಾಯಯುತ ಬೆಲೆಗಾಗಿ ಕಳೆದೊಂದು ತಿಂಗಳಿನಿಂದ ನಡೆಸಿದ ಹೋರಾಟದ ಪರಿಣಾಮ ಪ್ರತಿ ಟನ್ ಕಬ್ಬಿಗೆ ಬೆಳಗಾವಿ ಜಿಲ್ಲೆಯಲ್ಲಿ ೩,೬೦೦ ರೂ. ಘೋಷಿಸಲಾಗಿದೆ. ಆದರೆ, ಮಹಾರಾಷ್ಟ್ರ ಸಕ್ಕರೆ ಕಾರ್ಖಾನೆಗಳು ೪,೨೦೦ ರೂ. ನೀಡಲು ಮುಂದಾಗಿವೆ.

----------
ಬಾಕ್ಸ್
೪,೦೦೦ ರೂ. ಘೋಷಿಸಿದ ಪ್ಯಾಕ್ಟರಿ
ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಗಳು ೩,೬೦೦ ರೂ. ನೀಡುವಂತೆ ಜಿಲ್ಲಾಡಳಿತದಿಂದ ಘೋಷಿಸಿದೆ. ಇದರ ನಡುವೆ ಕಾಗವಾಡದದ ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಮೊದಲ ಕಂತಿನÀಲ್ಲಿ ಪ್ರತಿ ಟನ್‌ಗೆ ೩,೭೦೦ ರೂ., ಎರಡನೇ ಕಂತಿನ ಹಣ ಹಂಗಾಮು ಮಗಿದ ಬಳಿದ ೧೦೦ ರೂ. ಹಾಗೂ ಮೂರನೇ ಕಂತು ಸಕ್ಕರೆ ಮಾರಾಟ ದರ ಪ್ರತಿ ಕೆಜಿಗೆ ೫೦ ರೂ. ಇದ್ದಲ್ಲಿ ೨೦೦ ರೂ. ಸೇರಿದಂತೆ ೪,೦೦೦ ನೀಡುವುದಾಗಿ ಘೋಷಿಸಿದ ಏಕೈಕ ಕಾರ್ಖಾನೆಯಾಗಿದೆ.

----------
ಕೋಟ್-೧
ಮಹಾರಾಷ್ಟ್ರದಲ್ಲಿ ಸಕ್ಕರೆ ರಿಕವರಿ ಶೆ.೧೩ರಷ್ಟಿದ್ದು, ೧೪ ತಿಂಗಳು ಕಬ್ಬು ಕಟಾವು ಮಾಡಲಾಗುತ್ತದೆ. ಕರ್ನಾಟಕದಲ್ಲಿ ಶೇ.೧೧ರಿಕವರಿ ಇದ್ದು, ೧೨ ತಿಂಗಳಿನಲ್ಲಿ ಕಬ್ಬು ಕಟಾವು ಮಾಡಲಾಗುತ್ತದೆ. ಇದರಿಂದ ದರದಲ್ಲಿ ಸ್ವಲ್ವ ವ್ಯತ್ಯಾಸವಾಗಿದೆ. ರೈತರು ಆತಂಕ ಪಡಬೇಕಿಲ್ಲ. ಸಕ್ಕರೆ ದರ ೫೫ ರೂ. ಮಾರಾಟವಾಗುತ್ತಿರುವುದರಿಂದ ಲಾಭಾಂಶದ ಹಂಚಿಕೆ ಹಣ ಸೇರಿ ಒಟ್ಟು ೪,೩೫೦ ರೂ. ಸಿಗಲಿದೆ.
| ಚೂನಪ್ಪ ಪೂಜೇರಿ
ಅಧ್ಯಕ್ಷ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ