ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡಬೇಡಿ
| ಶಶಿರೇಖಾ ಚೆಲುವಪ್ಪಾ ಸಲಹೆ | ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ವಿದ್ಯಾರ್ಥಿಗಳು ಪಠ್ಯದ ಶಿಕ್ಷಣದ ಜತೆಗೆ ವಿಜ್ಞಾನದ ಮಹತ್ವ ಹಾಗೂ ಬಹು ಕೌಶಲ ವೃದ್ಧಿಸಿಕೊಳ್ಳಬೇಕು ಎಂದು ಬಹುಮುಖ ಪ್ರತಿಭೆ ಶಶಿರೇಖಾ ಚೆಲುವಪ್ಪಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಮರಾಠಾ ಮಂದಿರ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ನಾಯ್ಕರ ಶಿಕ್ಷಣ ಸಂಸ್ಥೆಯ ರವೀಂಧ್ರನಾಥ ಟ್ಯಾಗೋರ ಪ.ಪೂ.ಮಹಾವಿದ್ಯಾಲಯದ ಇನ್ಪೋತ್ಸವ-೨೦೨೬ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಓದುತ್ತಿರುವಾಗಲೇ ತಮ್ಮ ಅಧ್ಯಯನ ಜತೆಗೆ ವಿಜ್ಞಾನ, ಕಲೆ ಹಾಗೂ ಸಾಂಸ್ಕೃತಿಕ ವಿಷಯಗಳಲ್ಲೂ ಆಸಕ್ತಿ ವಹಿಸಿಸಬೇಕು.ಪ್ರೌಢಶಾಲಾ ಹಂತದಲ್ಲೆ ವಿಜ್ಞಾನವನ್ನು ಪ್ರಾಯೋಗಿಕವಾಗಿ ಅಧ್ಯಯನ ಮಾಡಬೇಕು, ವಿದ್ಯಾರ್ಥಿಗಳು ಮೊಬೈಲ ಬಳಕೆ ಕಡಿಮೆ ಮಾಡಿ, ಯೋಗ, ಧ್ಯಾನ ವ್ಯಾಯಾಮದೊಂದಿಗೆ ಆರೋಗ್ಯಕರ ಜೀವನ ನಡೆಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಸಿ.ಎನ್.ನಾಯ್ಕರ ಮಾತನಾಡಿ ವಿದ್ಯಾರ್ಥಿಗಳು ನಿರಂತರ ಅದ್ಯಯನದೊಂದಿಗೆ ಸತತ ಪ್ರಯತ್ನಮಾಡಿ ಗುರುಗಳ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿದರೆ ಶೈಕ್ಷಣಿಕ ಜೀವನದಲ್ಲಿ ಯಶಸ್ಸುಸಾಧ್ಯ ಎಂದರು.
ಮಾಜಿ ಸಚಿವ ಶ್ಯಾಮ್ ಘಾಟಗೆ, ಸಂಸ್ಥೆಯ ಅಧ್ಯಕ್ಷೆ ಶ್ವೇತಾ ನಾಯ್ಕರ, ಮತ್ತು ಕಾರ್ಯದರ್ಶಿ ಎಸ್.ಎಸ್ ಅಣ್ಣಿಗೇರಿ ಇತರರಿದ್ದರು.