ಕೊಲೆಯಾದ ಮಹಿಳೆ ಐರಾವತ ಖೋತ 
ಬೆಳಗಾವಿ

ಪ್ರೀಯಕರನಿಂದಲೆ ಮಹಿಳೆಯ ಕೊಲೆ!

ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ಘಟನೆ

ಪ್ರೀಯಕರನಿಂದಲೆ ಮಹಿಳೆ  ಬರ್ಬರ ಹತ್ಯೆ!
ಚಿಕ್ಕೋಡಿ:
ಪ್ರಿಯಕರನೆ ಮಹಿಳೆಯನ್ನು ಕೊಲೆ ಮಾಡಿ ಪಟ್ಟಣದ ಹೊರವಲಯದಲ್ಲಿರುವ ಚನ್ಯಾನದಡ್ಡಿ ಹತ್ತಿರ ನಿರ್ಜನ ಪ್ರದೇಶದಲ್ಲಿ ಕಳೆದ ಹತ್ತುದಿನದ ಹಿಂದೆ ಮೃತದೇಹ ಬಿಸಾಕಿ ಮಂಗಳವಾರ ಪೋಲಿಸ್ ಠಾಣೆಗೆ ಆರೋಪಿ ಶರಣಾಗಿರುವ ಘಟನೆ ನಡೆದಿದೆ.  
ಕೊಲೆಯಾದ ಮಹಿಳೆ ನಣದಿವಾಡಿ ಗ್ರಾಮದ ಐರಾವತಿ ಸಂಜಯ ಖೋತ(೩೮), ಕೊಲೆ ಮಾಡಿರುವ ಆರೋಪಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ತಾಂಡಾ ಗ್ರಾಮದ ಸಂಜಯ ಚವ್ಹಾಣ(೨೯) ಎಂದು ಗುರುತಿಸಲಾಗಿದೆ.ಆರೋಪಿತನು ನ.೧೪ ರಂದು ಕೊಲೆ ಮಾಡಿ ಅರಣ್ಯ ಪ್ರದೇಶದ ನಿರ್ಜನ ಪ್ರದೇಶದಲ್ಲಿ ಮೃತದೇಹ ಎಸೆದಿದ್ದನು.ಕೊಲೆ ಮಾಡಿದ ೧೦ ದಿನಗಳ ನಂತರ ಆರೋಪಿತನು ತಾನೆ ಕೊಲೆ ಮಾಡಿರುವ ಬಗ್ಗೆ ಪೋಲಿಸ ಠಾಣೆಗೆ ಮಾಹಿತಿ ನೀಡಿದ್ದಾನೆ. ಕೊಲೆಯಾದ ಮಹಿಳೆ ಮತ್ತು ಆರೋಪಿ ಇಬ್ಬರು ಹೋಟೆಲ್‌ಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೊಲೆಯಾದ ಮಹಿಳೆ ಜತೆ ಆರೋಪಿ ಕಳೆದ ೭ ವರ್ಷಗಳಿಂದ ಸಂಬAಧ ಹೊಂದಿದ್ದನು ಎನ್ನಲಾಗುತ್ತಿದೆ.ಕೊಲೆಗೆ ನಿಖರವಾದ ಕಾರಣ ಪೊಲೀಸ್ ತನಿಖೆಯಿಂದಷ್ಟೆ ತಿಳಿಯಬೇಕಿದೆ.
ಈ ಕುರಿತು ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.