ಬೆಳಗಾವಿ ಜಿಲ್ಲಾಧಿಕಾರಿಗೆ ರೈತ ಸಂಘದಿಂದ ಮನವಿ ಸಲ್ಲಿಸಿದರು. 
ಬೆಳಗಾವಿ

ಪ್ರತಿ ಟನ್ ಕಬ್ಬಿಗೆ ೬ ಸಾವಿರ ರೂ.ನೀಡುವಂತೆ ಒತ್ತಾಯ

ರೈತ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

ಪ್ರತಿ ಟನ್ ಕಬ್ಬಿಗೆ ೬ ಸಾವಿರ ದರ ನಿಗದಿ ಪಡಿಸಿ  
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಪ್ರತಿ ಟನ್ ಕಬ್ಬಿಗೆ ೬ ಸಾವಿರ ರೂ. ಬೆಲೆ ನಿಗದಿ ಪಡಿಸಿ ಶೀಘ್ರ ಸಕ್ಕರೆ ಕಾರ್ಖಾನೆಗಳು ಪ್ರಾರಂಭಿಸುವAತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರುನಾಡು ರೈತ ಸಂಘದಿAದ ಮಂಗಳವಾರ ಜಿಲ್ಲಾಽಕಾರಿಗೆ ಮನವಿ ಸಲ್ಲಿಸಲಾಗಿದೆ.
ಜಿಲ್ಲೆಯಲ್ಲಿ ರೈತರು ಬೆಳೆದಿರುವ ಕಬ್ಬು ಮಳೆ ಇಲ್ಲದೆ ಇರುವುದರಿಂದ ಹೊಲದಲ್ಲಿ ಒಣಗುತ್ತಿದೆ. ಕಬ್ಬು ಹಂಗಾಮು ಕೂಡಲೇ ಆರಂಭಿಸಬೇಕು. ಮತ್ತು ಪ್ರತಿ ಟನ್ ಕಬ್ಬಿಗೆ ೬ ಸಾವಿರ ರೂ.ದರ ನಿಗದಿ ಪಡಿಸಬೇಕು ಎಂದು. ಸಕ್ಕರೆ ಕಾರ್ಖಾನೆಗಳು ಪ್ರಾರಂಭ ವಿಳಂಬವಾದಲ್ಲಿ ರೈತರ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಲಿದೆ. ರೈತರ ಹಿತ ಕಾಪಾಡಲು ಸರ್ಕಾರ ಅಗತ್ಯ ಕ್ರಮವಹಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಸೋಮು ರೈನಾಪುರ,ವೀರಪ್ಪ ದೇಶನೂರ,ಬಸನಗೌಡ ಪಾಟೀಲ, ಶಿವನಗೌಡ ಗೌಡರ, ಹನಮಂತ ಕಿಡದಾಳ ಇತರರಿದ್ದರು.