ಸಂಕೇಶ್ವರ ವೈದ್ಯ ಸಚಿನ ಪಟ್ಟಣಶೆಟ್ಟಿ ಆತ್ಮಹತ್ಯೆ  
ಬೆಳಗಾವಿ

ಪತ್ನಿ ತೀರಿಕೊಂಡಿದ್ದರಿಂದ ಮನನೊಂದ ವೈದ್ಯ ಆತ್ಮಹತ್ಯೆ!

ಸಂಕೇಶ್ವರದಲ್ಲಿ ದಂತ ವೈದ್ಯ ಆತ್ಮಹತ್ಯೆ!

ಆನಂದಕುಮಾರ ಭಮ್ಮನ್ನವರ

ಪತ್ನಿ ತೀರಿಕೊಂಡಿದ್ದರಿಂದ ಮನನೊಂದ ವೈದ್ಯ ಆತ್ಮಹತ್ಯೆ
ಸಂಕೇಶ್ವರ: ಪತ್ನಿ ತೀರಿಕೊಂಡಿದ್ದರಿಂದ ಮನನೊಂದ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ದಂತ ವೈದ್ಯ ಸಚಿನ ಪಟ್ಟಣಶೆಟ್ಟಿ (೪೮) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.
ಮೃತ ಸಚಿನ ಪಟ್ಟಣಶೆಟ್ಟಿ ಪತ್ನಿ ಕಳೆದ ಹಲವು ತಿಂಗಳುಗಳ ಹಿಂದೆ ತೀರಿಕೊಂಡಿದ್ದು, ಮನನೊಂದು ಹಾಗೂ ಎರಡನೇ ಮದುವೆಯಾಗದೆ ಇರುವುದರಿಂದ ಮಾನಸಿಕವಾಗಿ ನೊಂದು ತಮ್ಮ ಮನೆಯಲ್ಲಿಯೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತನ ತಾಯಿ ದೂರಿನಲ್ಲಿ ಉಲ್ಲೆಖಿಸಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡ ಸಂಕೇಶ್ವರ ಠಾಣೆಯ ಪೊಲೀಸ್‌ರು ತಿಳಿಸಿದ್ದಾರೆ.