ನಾರುತ್ತಿದೆ ಗೋಟುರು ಹಳ್ಳದ ರಸ್ತೆ
ಕಸದಿಂದ ದಾರಿ ಬಂದ್ | ಗ್ರಾಮಸ್ಥರ ಆಕ್ರೋಶ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ಹುಕ್ಕೇರಿ ತಾಲೂಕಿನ ಗೋಟೂರ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷÈದಿಂದ ಗ್ರಾಮದಲ್ಲಿರುವ ಹಳ್ಳದ ದಾರಿ ಕಸದಿಂದ ಮುಚ್ಚಿಕೊಂಡಿರುವ ಪರಿಣಾಮ ಇಲ್ಲಿನ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಗೋಟೂರ ಗ್ರಾಮದ ವಾರ್ಡ್ ನಂ.೧ರಲ್ಲಿ ಹಳ್ಳಕ್ಕೆ ಹೋಗುವ ರಸ್ತೆ ಸುಮಾರು ೩೦ ಅಡಿ ಅಗಲವಾಗಿದೆ. ಆದರೆ, ಸುಮಾರು ೩೦೦ ಅಡಿ ದಾರಿಯೂದ್ದಕ್ಕೂ ಸ್ವಚ್ಚತೆ ಇಲ್ಲ. ಕಸ-ಕಂಟಿ ಬೆಳೆದಿದೆ. ಗ್ರಾಮದ ಚರಂಡಿ ನೀರು ರಸ್ತೆ ಮೇಲೆ ಬಂದು ನಿಲ್ಲುತ್ತದೆ. ಇದರಿಂದ ಮೊದಲಿದ್ದ ರಸ್ತೆ ಸಂಪೂರ್ಣವಾಗಿ ಕಸದಿಂದ ಮುಚ್ಚಿಕೊಂಡಿದ್ದು, ಚರಂಡಿ ನೀರು ಸಾಗದೆ ಕೊಳಚೆ ಹೊಂಡದAತ್ತಾಗಿದೆ.
ಇದೆ ರಸ್ತೆ ಮಾರ್ಗವಾಗಿ ಸುಮಾರು ೫೦ಕ್ಕೂ ಅಧಿಕ ರೈತರ ಜಮೀನುಗಳಿವೆ. ಇಲ್ಲಿನ ಗಲೀಜು ಹಾಗೂ ಕಸದಿಂದ ದಾರಿಯಲ್ಲಿ ಓಡಾಡಲು ಸಾಧ್ಯವಾಗದೆ ಜನರು ಪರ್ಯಾಯ ಮಾರ್ಗವಾಗಿ ಸಂಚರಿಸುತ್ತಿದ್ದಾರೆ. ಹಳ್ಳದ ಬಳಿ ಇರುವ ಗುಪ್ತಾದೇವಿ ದೇವಸ್ಥಾನಕ್ಕೂ ಇದೇ ರಸ್ತೆ ಮಾರ್ಗವಾಗಿ ಹೋಗಬೇಕಾದ ಅನಿವಾರ್ಯತೆ ಇಲ್ಲಿಯ ಜನರದ್ದಾಗಿದೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಆಡಳಿತಾಧಿಕಾರಿಗಳು ಗ್ರಾಮದ ಚರಂಡಿ ಹಾಗೂ ಹಳ್ಳಕೆ ಸಾಗುವ ದಾರಿಯತ್ತ ಗಮನ ಹರಿಸಬೇಕು. ಗ್ರಾಮದ ಸ್ವಚ್ಚತೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬುವುದು ಗ್ರಾಮಸ್ಥರ ಒತ್ತಾಯವಾಗಿದೆ.
-----------
೧೦ಆನಂದ೧
ಗ