ಒಂದೇ ದಿನ ಡೆಂಘೆಗೆ ಇಬ್ಬರು ಬಲಿ
| ಜತ್ರಾಟ ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ
ನಿಪ್ಪಾಣಿ: ಡೆಂಘೆ ಜ್ವರದಿಂದ ಬಳಲುತ್ತಿದ್ದ ತಾಲೂಕಿನ ಜತ್ರಾಟ ಗ್ರಾಮದ ಅಭಿಜಿತ ಶ್ರೀಧರ ಜಾಧವ (೩೭) ಹಾಗೂ ಆನಂದ ಶಂಕರ ಕೋಳಿ (೬೯) ಶನಿವಾರ ಮೃತಪಟ್ಟಿದ್ದಾರೆ. ಡೆಂಘೆ ಪೀಡಿತ ಇಬ್ಬರು ಒಂದೇ ದಿನ ಸಾವಿಗೀಡಾಗಿರುವುದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಅಭಿಜಿತ ಮತ್ತು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಆನಂದ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಕೆಲ ದಿನಗಳಿಂದ ಗ್ರಾಮದಲ್ಲಿ ಡೆಂಘೆ ವ್ಯಾಪಕವಾಗಿ ಹರಡಿದ್ದು, ಸುಮಾರು ೧೦೦ಕ್ಕೂ ಅಽಕ ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಹೊಸ ರೋಗಿಗಳು ಪತ್ತೆಯಾಗುತ್ತಿರುವುದರಿಂದ ನಾಗರಿಕರಲ್ಲಿ ಆತಂಕ ಹೆಚ್ಚಿಸಿದೆ. ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಗ್ರಾಮ ಪಂಚಾಯಿತಿ ಜತೆಗೆ ಜನಪ್ರತಿನಿಽಗಳು ಗ್ರಾಮದ ಗಂಭೀರ ಪರಿಸ್ಥಿತಿ ಅರಿತು ಶೀಘ್ರವೇ ಗ್ರಾಮದಲ್ಲಿ ಡೆಂಘೆ ಜ್ವರ ಹತೋಟಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.