ಪ್ರತ್ಯೇಕ ಪ್ರಕರಣ: ಜೂಜಾಟದಲ್ಲಿ ತೊಡಗಿದ್ದ ೧೪ ಜನರು ವಶಕ್ಕೆ
ಚಿಕ್ಕೋಡಿ:
ಹುಕ್ಕೇರಿ ತಾಲೂಕಿನ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಜೂಜಾಟ ಆಡುತ್ತಿದ್ದ ಒಟ್ಟು ೧೪ ಜನರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.
ದೀಪಾವಳಿ ಹಬ್ಬದ ವೇಳೆ ಯಮಕನಮರಡಿ ಗ್ರಾಮದಲ್ಲಿ ಎರಡು ಪ್ರತ್ಯೇಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ ವೇಳೆ ಪೊಲೀಸ್ರು ದಾಳಿ ನಡೆಸಿ ೧೪ ಜನರನ್ನು ವಶಕ್ಕೆ ಪಡೆದು ಒಟ್ಟು ೫೯೩೦ ರೂ. ನಗದು ಹಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಯಮಕನಮರಡಿ ಠಾಣೆ ಪೊಲೀಸ್ರು ತಿಳಿಸಿದ್ದಾರೆ.