ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ತಮ್ಮ ೫೫ನೇ ಜನ್ಮದಿನವನ್ನು ಚಿಕ್ಕೋಡಿ ಪಟ್ಟಣದ ಸಂಜೀವಿನಿ ಅನಾಥಾಶ್ರಮದ ಮಕ್ಕಳಿಗೆ ಹಣ್ಣು, ಸಿಹಿ ವಿತರಿಸಿ ಆಚರಿಸಿಕೊಂಡರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು. 
ಬೆಳಗಾವಿ

ಜನ್ಮದಿನದ ಹೆಸರಿನಲ್ಲಿ ಅನಗತ್ಯ ಖರ್ಚು ಬೇಡ

ಶ್ರೀಶೈಲ ಜಗದ್ಗುರು ಶ್ರೀ ಸಲಹೆ

ಜನ್ಮದಿನದ ಹೆಸರಿನಲ್ಲಿ ಅನಗತ್ಯ ಖರ್ಚುಬೇಡ
| ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ | ಅನಾಥಾಶ್ರಮದಲ್ಲಿ ಜನ್ಮದಿನ ಆಚರಣೆ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ಜನ್ಮದಿನದ ಹೆಸರಿನಲ್ಲಿ ಅನಗತ್ಯ ಖರ್ಚು, ಆಡಂಬರದ ಆಚರಣೆಗಳಿಗೆ ಮುಂದಾಗುವ ಬದಲು ಸಮಾಜದಲ್ಲಿರುವ ಅನಾಥರು, ದುರ್ಬಲ ವರ್ಗದವರ ಕಣ್ಣೀರು ಒರೆಸಿ, ಅವರಿಗೆ ಸಾಂತ್ವನ ಹೇಳಿ ಕೈಲಾದ ನೆರವು ನೀಡುವುದೇ ಜನ್ಮದಿನದ ನಿಜವಾದ ಅರ್ಥ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಸಂಜೀವಿನಿ ಫೌಂಡೇಶನ್ ನಡೆಸುತ್ತಿರುವ ಅನಾಥಾಶ್ರಮಕ್ಕೆ ಈಚೆಗೆ ಭೇಟಿ ನೀಡಿ, ಮಕ್ಕಳಿಗೆ ಹಣ್ಣು, ಸಿಹಿ ಪದಾರ್ಥ ವಿತರಿಸಿ, ಆರ್ಥಿಕ ನೆರವು ನೀಡುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಅವರು ಮಾತನಾಡಿದರು.
ಉನ್ನತ ಸ್ಥಾನದಲ್ಲಿರುವವರು ತಮ್ಮ  ವಿಶೇಷ ದಿನಗಳನ್ನು ಕೇವಲ ವೈಯಕ್ತಿಕ ಸಂಭ್ರಮಕ್ಕೆ ಸೀಮಿತಗೊಳಿಸದೆ, ಸಮಾಜದಲ್ಲಿರುವ ಅನಾಥರು ಹಾಗೂ ದುರ್ಬಲರಿಗೆ ಸೇವೆ ಸಲ್ಲಿಸುವ ಮೂಲಕ ಆಚರಿಸಬೇಕು ಎಂದು ಜಗದ್ಗುರುಗಳು ಕರೆ ನೀಡಿದರು. ಇದೇ ವೇಳೆ ಯಡೂರ ಮಠದಿಂದ ಆಶ್ರಮಕ್ಕೆ ಒಂದು ತಿಂಗಳಿಗೆ ಬೇಕಾಗುವ ದಿನಸಿ ನೀಡಿದರು.
ಇದಕ್ಕೂ ಮೊದಲು ತಮ್ಮ ೫೫ನೇ ಜನ್ಮದಿನದ ಪ್ರಯುಕ್ತ ಯಡೂರ ಶ್ರೀವೀರಭದ್ರ ಸ್ವಾಮಿ ಹಾಗೂ ಭದ್ರಕಾಳಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು.
ಯಡೂರು ಮಠದ ವ್ಯವಸ್ಥಾಪಕ ಅಡಿವಯ್ಯ, ಪೀಠದ ಸಿಬ್ಬಂದಿಗಳು ಹಾಗೂ ಸ್ಥಳೀಯ ಮುಖಂಡರು ಇದ್ದರು.
---
ಕೋಟ್:
ಶ್ರೀಶೈಲ ಜಗದ್ಗುರುಗಳು ಮಹಾನ್ ದಾರ್ಶನಿಕ ಚಿಂತಕರು. ವಿದ್ಯೆ ಮತ್ತು ವಿನಯ ಸಂಪನ್ನರಾಗಿರುವ ಅವರು ಪ್ರತಿಯೊಂದು ಕಾರ್ಯದಲ್ಲೂ ಸಾಮಾಜಿಕ ಚಿಂತನೆಗಳನ್ನು ಅಳವಡಿಸಿಕೊಂಡಿದ್ದಾರೆ. ಜನ್ಮದಿನದಂದು ಅದ್ಧೂರಿ ಆಚರಣೆ ಬದಿಗಿಟ್ಟು ಅನಾಥಾಶ್ರಮದ ಮಕ್ಕಳೊಂದಿಗೆ ಸಂಭ್ರಮ ಹಂಚಿಕೊAಡಿರುವುದು ಸಮಾಜಕ್ಕೆ ಮಾದರಿಯಾಗಿದೆ
ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
 ಹಿರೇಮಠ. ಹುಕ್ಕೇರಿ
----