ಚಿಕ್ಕೋಡಿ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿ ಮಹಾಂತೇಶ ಕವಟಗಿಮಠ ಮಾತನಾಡಿದರು. 
ಬೆಳಗಾವಿ

ಚುನಾವಣೆ ನಡೆಸಲು ಸರ್ಕಾರ ಹಿಂದೇಟು!

ವಿ.ಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಆರೋಪ

ಚುನಾವಣೆ ನಡೆಸಲು ಇಚ್ಛಾಶಕ್ತಿ ಇಲ್ಲದ ಸರ್ಕಾರ
ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಆಗ್ರಹ | ಜಿಪಂ, ತಾಪಂ ಎಲೆಕ್ಷನ್ ಘೋಷಿಸಿ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ಪಂಚಾಯತ್ ರಾಜ್ ವ್ಯವಸ್ಥೆಯ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗೆ ಕಳೆದ ಐದು ವರ್ಷದಿಂದ ಚುನಾವಣೆ ನಡೆದಿಲ್ಲ. ಆಡಳಿತಾಽಕಾರಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದ್ದು, ಸರ್ಕಾರ ಕೂಡಲೇ ಮೂರು ಸಂಸ್ಥೆಗಳಿಗೆ ಚುನಾವಣೆ ಘೋಷಿಸಬೇಕೆಂದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಆಗ್ರಹಿಸಿದ್ದಾರೆ.
ಹಾಲಟ್ಟಿಯಲ್ಲಿರುವ ಕವಟಗಿಮಠ ಕನ್ವೆಷನ್ ಸಭಾಭವನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ೧,೯೮೩ರಲ್ಲಿ ಪ್ರಥಮ ಬಾರಿಗೆ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹಾಗೂ ಪಂಚಾಯತ್ ರಾಜ್ ಸಚಿವ ನಜೀರ್‌ಸಾಬ್ ಅವರ ಇಚ್ಛಾಶಕ್ತಿಯಿಂದ ರಾಜ್ಯದಲ್ಲಿ ಪಂಚಾಯತ್ ರಾಜ್ ಕಾಯ್ದೆ ಜಾರಿಗೆ ಬಂದಿತ್ತು. ಕಾಲ ಕಾಲಕ್ಕೆ ಬದಲಾಗಿ ಮಹಿಳೆಯರಿಗೆ ಶೇ.೫೦ರಷ್ಟು ಮೀಸಲಾತಿ, ಸ್ವತಂತ್ರ‍್ಯ, ಅನುದಾನ, ನ್ಯಾಯ ಪಂಚಾಯತ್ ಹಾಗೂ ಅಽಕಾರ ವಿಕೇಂದ್ರೀಕರಣದ ಮೂಲಕ ಮಾದರಿಯಾಗಿದ್ದ ಐತಿಹಾಸಿಕ ವ್ಯವಸ್ಥೆ ಇಂದು ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
೨೦೨೧ರ ಮೇ ತಿಂಗಳಿAದ ಜಿಪಂ ಮತ್ತು ತಾಪಂಗಳಿಗೆ ಚುನಾವಣೆ ನಡೆದಿಲ್ಲ. ಚುನಾವಣೆ ನಡೆಸಲು ಯಾವುದೇ ಕಾನೂನಿನ ಸಮಸ್ಯೆ ಇಲ್ಲದಿದ್ದರೂ, ಸರ್ಕಾರಕ್ಕೆ ಚುನಾವಣೆ ನಡೆಸಲು ಇಚ್ಛಾಶಕ್ತಿ ಇಲ್ಲವಾಗಿದೆ. ಕೋವಿಡ್, ಕ್ಷೇತ್ರ ಮರುವಿಂಗಡಣೆ ಹಾಗೂ ಒಬಿಸಿ ಟ್ರಿಪಲ್ ಟೆಸ್ಟ್ ನೆಪ ಒಡ್ಡಿ ಚುನಾವಣೆ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಗ್ರಾಮ ಪಂಚಾಯಿತಿ ಅವಽಯೂ ಮುಕ್ತಾಯಗೊಂಡು ಅವುಗಳಿಗೂ ಆಡಳಿತಾಽಕಾರಿಗಳನ್ನು ನೇಮಿಸಲಾಗಿದೆ. ಇದರಿಂದಾಗಿ ಸ್ಥಳೀಯ ಮಟ್ಟದಲ್ಲಿ ಜನರ ಕುಂದು-ಕೊರತೆ ಆಲಿಸಲು ಜನಪ್ರತಿನಿಽಗಳೇ ಇಲ್ಲದಂತಾಗಿದೆ. ಜತೆಗೆ ಕೇಂದ್ರ ಸರ್ಕಾರದ ೧೫ ಮತ್ತು ೧೬ನೇ ಹಣಕಾಸು ಆಯೋಗದಿಂದ ಪ್ರತಿ ಗ್ರಾಮ ಪಂಚಾಯಿತಿಗೆ ೩೫-೭೦ ಲಕ್ಷ ರೂ.ವರೆಗೆ ಅನುದಾನ ಬರಬೇಕಿತ್ತು. ಆದರೆ, ಹಳೆಯ ಅನುದಾನ ಸರಿಯಾಗಿ ಬಳಕೆಯಾಗದ ಕಾರಣ ಕೇಂದ್ರದಿAದ ಮುಂದಿನ ಕಂತಿನ ಹಣ ಬಿಡುಗಡೆಯಾಗುತ್ತಿಲ್ಲ. ಸ್ವಚ್ಛ ಭಾರತ, ವಸತಿ ಯೋಜನೆ ಹಾಗೂ ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಜನಪ್ರತಿನಿಽಗಳಿಲ್ಲದೆ ಗ್ರಾಮೀಣ ಅಭಿವೃದ್ಧಿ ಕುಂಠಿತಗೊAಡಿದೆ ಎಂದರು.
ಜಿಪA ಮಾಜಿ ಅಧ್ಯಕ್ಷ ರಾವಸಾಹೇಬ ಜಿಪರೆ, ನಿಂಗಪ್ಪ ಕುರಬರ, ಬಾಬಾಸಾಹೇಬ ಕೆಂಚನ್ನವರ, ಸಂಜು ಪಾಟೀಲ, ಮಹಾಂತೇಶ ಬಾತೆ, ಬಸವರಾಜ ಬಾತೆ ಇದ್ದರು.
---------
ಬಾಕ್ಸ್-೧
ಸಂವಿಧಾನ ಆಶಯಕ್ಕೆ ಧಕ್ಕೆ
ಜಿಲ್ಲೆಯ ರಾಜು ಪಾಟೀಲ, ಸುರೇಶ ಮಾರಿಹಾಳ, ಈರಣ್ಣ ಕಡಾಡಿ, ಸಚ್ಚಿದಾನಂದ ಖೋತ, ಪ್ರಕಾಶ ಹುಕ್ಕೇರಿ, ಅಣ್ಣಾಸಾಹೇಬ ಜೊಲ್ಲೆ ಹಾಗೂ ಅಮರಸಿಂಹ ಪಾಟೀಲರಂತ ನಾಯಕರು ಜಿಪಂ ಮೂಲಕ ಬೆಳೆದು ಶಾಸಕ, ಸಂಸದರಾದವರು. ಆದರೆ, ಇಂದು ಚುನಾವಣೆ ನಡೆಯದ ಕಾರಣ ಇಂದಿನ ಯುವಕರಿಗೆ ರಾಜಕೀಯ ಅವಕಾಶವೇ ಸಿಗದಂತಾಗಿದೆ. ಅಽಕಾರ ವಿಕೇಂದ್ರೀಕರಣ ಬಗ್ಗೆ ಮಾತಾಡುವ ಸರ್ಕಾರ, ಚುನಾವಣೆ ನಡೆಸದೆ ಅಽಕಾರವನ್ನು ತನ್ನ ಬಳಿಯೇ ಕೇಂದ್ರೀಕರಿಸಿಕೊAಡು ಸಂವಿಧಾನದ ಆಶಯಕ್ಕೆ ಧಕ್ಕೆ ತರುತ್ತಿದೆ. ಸರ್ಕಾರ ತಕ್ಷಣವೇ ಚುನಾವಣಾ ದಿನಾಂಕ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
-----------
೬ಆನಂದ೫:
ಸ