ಅರಿಹಂತ ಆಸ್ಪತ್ರೆ ಕಾರ್ಯ ಶ್ಲಾಘನೀಯ
| ಡಾ.ಎಂ.ಡಿ.ದೀಕ್ಷಿತ್ ಬಣ್ಣನೆ | ಆಸ್ಪತ್ರೆ ನಾಲ್ಕನೇ ವಾರ್ಷಿಕೋತ್ಸವ ಸಮಾರಂಭ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಗುಣಮಟ್ಟದ ಚಿಕಿತ್ಸೆಗೆ ಹೆಸರುವಾಸಿಯಾಗಿರುವ ಅರಿಹಂತ ಆಸ್ಪತ್ರೆಯು ರೋಗಿಗಳ ಪಾಲಿಗೆ ಆಸರೆಯಾಗಿದೆ ಎಂದು ಡಾ. ಎಂ.ಡಿ. ದೀಕ್ಷಿತ್ ಆಸ್ಪತ್ರೆಯ ಕಾರ್ಯವನ್ನು ಶ್ಲಾಘಿಸಿದರು.
ನಗರದ ಅರಿಯಂತ ಆಸ್ಪತ್ರೆಯಲ್ಲಿ ಈಚೆಗೆ ಆಯೋಜಿಸಿದ್ದ ನಾಲ್ಕನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಧುನಿಕ ವೈದ್ಯಕೀಯ ಸೌಲಭ್ಯ, ನುರಿತ ವೈದ್ಯರ ತಂಡ ಹಾಗೂ ಗುಣಮಟ್ಟದ ಸೇವೆಯ ಮೂಲಕ ಕೇವಲ ನಾಲ್ಕು ವರ್ಷಗಳಲ್ಲಿ ಆಸ್ಪತ್ರೆಯು ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಅಲ್ಪಾವಽಯಲ್ಲಿಯೇ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಮೂಲಕ ವಿಶ್ವಾಸಾರ್ಹ ಆಸ್ಪತ್ರೆಯಾಗಿ ಗುರುತಿಸಿಕೊಂಡಿರುವುದು ಜನರ ವಿಶ್ವಾಸಕ್ಕೆ ಸಾಕ್ಷಿಯಾಗಿದ ಎಂದರು.
ಆಸ್ಪತ್ರೆಯ ವ್ಯವಸ್ಥಾಪಕ ಮಲ್ಲೇಶ ಯಡ್ಡಿ ಮಾತನಾಡಿ ಪ್ರಸ್ತುತ ವರ್ಷದಲ್ಲಿ ೪೨ ಸಾವಿರ ರೋಗಿಗಳಿಗೆ ಹೊರರೋಗಿ ವಿಭಾಗದಲ್ಲಿ (ಒಪಿಡಿ) ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗಿದೆ. ಹೃದ್ರೋಗ ಚಿಕಿತ್ಸಾ ವಿಭಾಗದಲ್ಲಿ ಇದುವರೆಗೆ ೧,೦೫೦ ಹೃದಯ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಅಲ್ಲದೆ, ೨,೭೦೦ ಆಂಜಿಯೋಗ್ರಫಿ ಹಾಗೂ ೧,೮೫೭ ಆಂಜಿಯೋಪ್ಲಾಸ್ಟಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.
ಹೃದಯ ಚಿಕಿತ್ಸೆಯ ಜತೆಗೆ ಇತರ ವೈದ್ಯಕೀಯ ವಿಭಾಗಗಳಲ್ಲಿಯೂ ಆಸ್ಪತ್ರೆ ಮಹತ್ವದ ಸೇವೆ ಸಲ್ಲಿಸಿದೆ. ೧,೬೦೦ ಸಾಮಾನ್ಯ ಶಸ್ತ್ರಚಿಕಿತ್ಸೆಗಳು ಹಾಗೂ ಜಠರ ಸಂಬAಽ ಚಿಕಿತ್ಸಾ ಪ್ರಕ್ರಿಯೆಗಳನ್ನು ನಡೆಸಲಾಗಿದೆ. ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ೩ ಸಾವಿರ ಡಯಾಲಿಸಿಸ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆಯ ನಿರ್ದೇಶಕ ಅಭಿನಂದನ ಪಾಟೀಲ ಹಾಗೂ ಯುವ ಮುಖಂಡ ಉತ್ತವi ಪಾಟೀಲ ಅವರ ಮಾರ್ಗದರ್ಶನದಲ್ಲಿ ಆಧುನಿಕ ಚಿಕಿತ್ಸಾ ತಂತ್ರಜ್ಞಾನ, ಅನುಭವಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಸಹಕಾರದಿಂದ ಆಸ್ಪತ್ರೆಯು ನಿರಂತರವಾಗಿ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಮೀನಾಕ್ಷಿ ಪಾಟೀಲ, ಡಾ.ಮಾಧುರಿ ದೀಕ್ಷಿತ್, ಡಾ.ಪ್ರಭು ಹಲಕಟ್ಟಿ, ಡಾ.ವರದರಾಜ ಗೋಕಾಕ, ಡಾ.ನಿಖಿಲ್ ದೀಕ್ಷಿತ ಹಾಗೂ ವೈದ್ಯಕೀಯ ಸಿಬ್ಬಂದಿ ಇದ್ದರು.
ಪೋಟೊ:೩ಆನಂದ೩
ಬೆಳಗಾವಿ ನಗರದ ಅರಿಯಂತ ಆಸ್ಪತ್ರೆಯಲ್ಲಿ ಈಚೆಗೆ ಆಯೋಜಿಸಿದ್ದ ನಾಲ್ಕನೇ ವಾರ್ಷಿಕೋತ್ಸವ ಸಮಾರಂಭವನ್ನು ಮೀನಾಕ್ಷಿ ಪಾಟೀಲ ಉದ್ಘಾಟಿಸಿದರು.ಡಾ.ಮಾಧುರಿ ದೀಕ್ಷಿತ್, ಡಾ.ಪ್ರಭು ಹಲಕಟ್ಟಿ, ಡಾ.ವರದರಾಜ ಗೋಕಾಕ, ಡಾ.ನಿಖಿಲ್ ದೀಕ್ಷಿತ ಇದ್ದರು.