ಮೃತ ಯುವಕ ಬಾಬು ಅಮಾತೆ 
ಬೆಳಗಾವಿ

ಅಪಘಾತದಲ್ಲಿ ಗಾಯಗೊಂಡ ಯುವಕ ಸಾವು

ದುರ್ಗಾಮಾತಾ ಮೂರ್ತಿ ತರುವಾಗ ನಡೆದಿದ್ದ ಅಪಘಾತ

ಅಪಘಾತದಲ್ಲಿ ಗಾಯಗೊಂಡ ಯುವಕ ಸಾವು

ಚಿಕ್ಕೋಡಿ: ಕಳೆದ ಭಾನುವಾರ ನಡೆದ ಅಪಘಾತದಲ್ಲಿ ಗಾಯಗೊಂಡ ಚಿಕಿತ್ಸೆ ಪಡೆಯುತ್ತಿದ್ದ ಹುಕ್ಕೇರಿ ತಾಲೂಕಿನ ಹಂಜಾನಟ್ಟಿ ಗ್ರಾಮದ ಯುವಕ ಬಾಬು ಅಮಾತೆ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾನೆ.

ಕಳೆದ ಭಾನುವಾರ ಬೆಳಗಾವಿಯಿಂದ ಹುಕ್ಕೇರಿ ತಾಲೂಕಿನ ಹಂಜಾನಟ್ಟಿಗೆ ದುರ್ಗಾದೇವಿ ಮೂರ್ತಿ ಕೊಂಡಯುತ್ತಿದ್ದ ಟ್ರಾಕ್ಟರ್ ಗೆ ಹಿಂದಿನಿಂದ ಲಾರಿ ಡಿಕ್ಕಿಯಾಗಿತ್ತು.ಅಪಘಾತದಲ್ಲಿ ಮೃತರಾದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.