ಅಧಿವೇಶನ ವೇಳೆ ರೈತ ಮುಖಂಡರಿಗೂ ವಸತಿ ಸೌಕರ್ಯ ನೀಡುವಂತೆ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. 
ಬೆಳಗಾವಿ

ಅಧಿವೇಶನದ ವೇಳೆ ವಸತಿ ಕಲ್ಪಿಸಿ

ರೈತ ಮುಖಂಡ ಗಣೇಶ ಇಳೆಗೇರ ಒತ್ತಾಯ

ಅಧಿವೇಶನದ ವೇಳೆ ರೈತ ಮುಖಂಡರಿಗೂ ವಸತಿ ಕಲ್ಪಸಿ

| ಗಣೇಶ ಇಳಿಗೇರ ಆಗ್ರಹ | ಜಿಲ್ಲಾಧಿಕಾರಿಗೆ ಮನವಿ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಡಿ.೨ ರಿಂದ ನಡೆಯಲಿರುವ ಚಳಿಗಾಲ ಅಧಿವೇಶದನ ವೇಳೆ ರೈತ ಸಂಘದ ಮುಖಂಡರಿಗೆ ವಸತಿ ವ್ಯವಸ್ಥೆ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮತ್ತು ರೈತರ ಕ್ಷೇಮಾಭಿವೃದ್ಧಿ ಸಂಘದಿಂದ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರೈತರ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯಲು ಅಽವೇಶನದ ವೇಳೆ ಆಗಮಿಸುವ ರಾಜ್ಯದ ವಿವಿಧ ಜಿಲ್ಲೆಯಿಂದ ಬರುವ ರೈತ ಮುಖಂಡರಿಗೆ ನಗರದಲ್ಲಿ ವಸತಿ(ಕೊಠಡಿ) ವ್ಯವಸ್ಥೆ ಮಾಡಬೇಕು,ಇದರಲ್ಲಿ ತಾರತಮ್ಯ ಮಾಡಬಾರದು. ಕಬ್ಬು ಬೆಳೆಗೆ ೧ ಸಾವಿರ ರೂ. ಎಸ್‌ಎಪಿ ಘೋಷಣೆ ಮಾಡಬೇಕು, ರೈತರ ಬೆಳೆಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಹಾಗೂ ಅಽವೇಶನದ ವೇಳೆ ರೈತರ ಸಮಸ್ಯೆ ಬಗ್ಗೆ ಚರ್ಚಿಸಲು ರೈತರ ಜತೆ ಮುಖ್ಯಮಂತ್ರಿ ಸಭೆ ನಡೆಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.

ರಾಜ್ಯಾಧ್ಯಕ್ಷ ಗಣೇಶ ಇಳಿಗೇರ, ಸುರೇಶ ಪರಗಣ್ಣವರ, ರಾಘವೇಂದ್ರ ನಾಯಕ, ಪ್ರಸಾದ ಕುಲಕರ್ಣಿ, ಪುಂಡಲಿಕ ಉಳ್ಳಾಗಡ್ಡಿ, ಸಿದ್ರಾಮ ಜೋಡಟ್ಟಿ, ಭೀರಪ್ಪ ಖಿಲಾರಿ ಇತರರಿದ್ದರು.