ತೆಲಸಂಗ ಗ್ರಾಮದ ಬಿವಿವಿ ಸಂಘದ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಸವರಾಜ ಹೊನಕಾಂಬಳೆ ಮಾತನಾಡಿದರು. ಮಲ್ಲಪ್ಪ ತೇಲಿ, ಬಸವರಾಜ ಹನಕಾಂಬಳೆ, ಎಸ್.ಡಿ.ಸನಗೊಂಡ ಇತರರಿದ್ದರು.
ತೆಲಸಂಗ: ಯುವಜನತೆ ಉತ್ತಮ ಸಂಸ್ಕಾರ, ಪರಿಸರದ ಬಗ್ಗೆ ಕಾಳಜಿ ಹಾಗೂ ತಂದೆ-ತಾಯಿಗೆ ಗೌರವಿಸುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ದೇಶದ ಭವಿಷ್ಯ ಸದೃಢವಾಗಲಿದೆ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.
ಬಿವಿವಿ ಸಂಘದ ಎಂ.ವೈ.ಖ್ಯಾಡಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡೆ ಚಟುವಟಿಕೆ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ನ ಜಂಟಿ ಉದ್ಘಾಟನೆ ಹಾಗೂ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಯುವಕರು ಸಮಯ ವ್ಯರ್ಥ ಮಾಡದೇ ಆತ್ಮವಿಶ್ವಾಸ, ಶಿಸ್ತು ಮತ್ತು ಸಂಸ್ಕಾರ ಬೆಳೆಸಿಕೊಂಡು, ಗುರಿಯತ್ತ ಸಾಗಬೇಕು ಎಂದರು.
ಅಥಣಿ ವಲಯ ಅರಣ್ಯ ಅಽಕಾರಿ ಮಲ್ಲಪ್ಪ ತೇಲಿ ಮಾತನಾಡಿ, ಪರಿಸರ ಸಂರಕ್ಷಣೆ ಯುವಜನತೆಯ ಜವಾಬ್ದಾರಿ. ಒಂದು ಗಿಡ ನೆಡುವುದು ಎಂದರೆ ಕೇವಲ ಮರ ಬೆಳೆಸುವುದಲ್ಲ, ಮುಂದಿನ ಪೀಳಿಗೆಗೆ ಜೀವ ನೀಡುವುದಾಗಿದೆ ಎಂದು ಹೇಳಿದರು.
ಪಿಡಿಒ ಬಸವರಾಜ ಹನಕಾಂಬಳೆ ಮಾತನಾಡಿದರು. ಪ್ರಾಚಾರ್ಯ ಎಸ್.ಡಿ.ಸನಗೊಂಡ, ವಿ.ಸಿ.ಪಾಟೀಲ, ಡಿ.ಎಸ್.ಹತ್ತಿ, ಎಸ್.ಡಿ.ಅರ್ಧಾವೂರ, ಎಲ್.ಎ.ಮೇತ್ರಿ, ಸುರೇಶ ಅವಟಿ, ಡಿ.ಬಿ.ಗಡದೆ, ಎ.ಎಂ.ಹಿರೇಮಠ, ಎಂ.ಪಿ.ಸನದಿ ಇತರರಿದ್ದರು.