Young woman murdered while traveling with lover
ಉಳ್ಳಾಗಡ್ಡಿ&ಖಾನಾಪುರ: ಪ್ರೀತಿಸಿದವನೊಂದಿಗೆ ಹೋಗಿ ಕುಟುಂಬದ ಮಾನ ಹರಾಜು ಹಾಕಿದ್ದಾಳೆಂದು ಯುವತಿಯನ್ನು ಕೊಲೆ ಮಾಡಿ ಸಾಕ್ಷ$್ಯ ನಾಶಪಡಿಸಲು ಶವ ಸುಟ್ಟು ಹಾಕಿದ ಪ್ರಕರಣ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ರಾಯಬಾಗ ತಾಲೂಕಿನ ಹಣಬರಟ್ಟಿ ಗ್ರಾಮದ ಸತ್ಯವ್ವ ಹೆಳವಿ (24) ಕೊಲೆಗೀಡಾದ ಯುವತಿ. ಹುಕ್ಕೇರಿ ತಾಲೂಕಿನ ನದಿ ಗುಡಿೇತ್ರ ಗ್ರಾಮದ ಪ್ರಕಾಶ ಹೆಳವರ, ಶ್ಯಾನೂರ ಹೆಳವರ, ರಾಯಬಾಗ ತಾಲೂಕಿನ ಮೊರಬದ ಕಲ್ಲಪ್ಪ ಬಂಧಿತ ಕೊಲೆ ಆರೋಪಿಗಳು.
ಹುಕ್ಕೇರಿ ತಾಲೂಕಿನ ನದಿ ಗುಡಿೇತ್ರದ ಕೃಷ್ಣಾ ಪಾಟೀಲ (28) ಹಾಗೂ ಸತ್ಯವ್ವ ಹೆಳವಿ ಪ್ರೀತಿಸುತ್ತಿದ್ದರು. ೆಬ್ರವರಿ 17ರಂದು ರಾಯಬಾಗದ ಹಣಬರಟ್ಟಿಯಿಂದ ಬಂದು ಬೈಲಹೊಂಗಲದ ಬೆಳವಡಿಯಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ಇಬ್ಬರನ್ನೂ ಕುಟುಂಬದವರು ಕರೆದುಕೊಂಡು ಬಂದಿದ್ದರು. ನಂತರ ಸತ್ಯವ್ವಳನ್ನು ಮೂರೂ ಆರೋಪಿಗಳು ಕೊಲೆಮಾಡಿ ಸಾಕ್ಷ$್ಯ ನಾಶಪಡಿಸಲು ಶವ ಸುಟ್ಟು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ಯಮಕನಮರಡಿಯ ಪಿಎಸ್ಐ ಎಸ್.ಕೆ.ಮನ್ನಿಕೇರಿ ಹಾಗೂ ಸಿಪಿಐ ಜಾವೇದ್ ಮುಶಪುರಿ ಪ್ರಕರಣ ಭೇದಿಸಿದ್ದಾರೆ.