ಬೈಲಹೊಂಗಲದಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ಜರುಗಿತು. ರವಿ ಚೌಹಾಣ, ರೋಹಿಣಿ ಬಸ್ಸಾಪುರ, ಆದಿತ್ಯ ಹೊಸಳಕರ, ಸಿ.ಬಿ.ಗಣಾಚಾರಿ ಇತರರಿದ್ದರು. 
ಬೆಳಗಾವಿ

ಯುವಕರು ಮಾದಕ ವ್ಯಸನದಿಂದ ದೂರವಿರಲಿ

ಬೈಲಹೊಂಗಲ: ಯುವಜನರು ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಽÃಶ ರವಿ ಚೌಹಾಣ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಈಚೆಗೆ ನಗರದ ಚನ್ನಮ್ಮ ಐಕ್ಯ ಸ್ಥಳದಿಂದ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ವಿರೋಧಿ ದಿನ ಅಂಗವಾಗಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಬಳಕೆ ಯುವಜನರಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ಮತ್ತು ಯುವಕರು ಕ್ಷಣಿಕ ಸುಖಕ್ಕಾಗಿ ಮಾದಕ ವ್ಯಸನದ ಕಡೆ ಆಕರ್ಷಿತರಾಗದೇ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಗಣಾಚಾರಿ ಮಹಾವಿದ್ಯಾಲಯದ ಪ್ರಾಚಾರ್ಯ ಸಿ.ಬಿ.ಗಣಾಚಾರಿ ಮಾತನಾಡಿ, ವಿದ್ಯಾರ್ಥಿಗಳು ಆರೋಗ್ಯಕರ ಜೀವನಶೈಲಿ ಅಳವಡಿಸಿ ದುಶ್ಚಟಗಳಿಂದ ದೂರವಿರಬೇಕು. ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕಿದ್ದು, ಅಭಿಯಾನಗಳಿಂದ ಸಮಾಜದಲ್ಲಿ ಉತ್ತಮ ಸಂದೇಶ ರವಾನೆ ಆಗುತ್ತದೆ ಎಂದರು.
ಪ್ರಧಾನ ದಿವಾಣಿ ನ್ಯಾಯಾಧೀಶೆ ರೋಹಿಣಿ ಬಸ್ಸಾಪುರ, ಹೆಚ್ಚುವರಿ ನ್ಯಾಯಾಧೀಶ ಆದಿತ್ಯ ಹೊಸಳಕರ, ಸರ್ಕಾರಿ ಅಭಿಯೋಜಕಿ ಸರೋಜಿನಿ ಬಟಕುರ್ಕಿ, ಅಪರ ಸರ್ಕಾರಿ ವಕೀಲ ರಮೇಶ ಕೋಲಕಾರ, ವಕೀಲರ ಸಂಘದ ಅಧ್ಯಕ್ಷ ಸಿ.ಎಚ್.ಹೊಸಮನಿ, ಉಪಾಧ್ಯಕ್ಷ ಎಸ್.ವಿ.ಹಿರೇಮಠ, ಕಾರ್ಯದರ್ಶಿ ಐ.ಬಿ.ಮೇಟಿ, ಜಂಟಿ ಕಾರ್ಯದರ್ಶಿ ವಿಜಯಕುಮಾರ ಅಲಸಂದಿ, ಆರೋಗ್ಯ ನಿರೀಕ್ಷಣಾಽಕಾರಿ ಡಿ.ಎಸ್.ಜಂಡೆಕರ ಇತರರಿದ್ದರು.